
ಬೆಳ್ತಂಗಡಿ: (ಫೆ-28): ಬೆಳ್ತಂಗಡಿ ಕೋರ್ಟ್ ಅವರಣದಲ್ಲಿರುವ ಪಂಚಾಯತ್ ನೀರಿನ ಟ್ಯಾಂಕ್ ಮೀಟರ್ ಸರಿಪಡಿಸುವ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನೀರಿನ ನೌಕರ ರೋನಾಲ್ಡ್ ಸಂಜಯನಗರ ಮೇಲೆ ಹೆಜ್ಜೇನು ದಾಳಿ ನಡೆದಿದ್ದು, ತಕ್ಷಣ ಕಾರ್ಯಪ್ರವೃತರಾದ ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ಅವರು ಕೂಡಲೇ ರಕ್ಷಣಾ ಕಾರ್ಯಕ್ಕೆ ದಾವಿಸಿ ಹೆಜ್ಜೇನು ಓಡಿಸಿ ನೌಕರರನ್ನು ನೀರಿನ ಟ್ಯಾಂಕಿನಿಂದ ಕೆಳಗಿಳಿಸಿ ಜೀವ ರಕ್ಷಿಸಿದ್ದಾರೆ.
ಗಂಭೀರ ಗಾಯಗೊಂಡಿರುವ ರೋನಾಲ್ಡ್ ಸಂಜಯನಗರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ರಕ್ಷಣಾ ಕಾರ್ಯದಲ್ಲಿ ಬೆಳ್ತಂಗಡಿ ಸಂಜಯನಗರ ನಿವಾಸಿಗಳಾದ ಅಕ್ಬರ್ ಬೆಳ್ತಂಗಡಿ, ರಶೀದ್ ಬೆಳ್ತಂಗಡಿ, ಬದ್ರು ಮಟ್ಲ, ಶಫೀರ್ ಸಂಜಯನಗರ, ಇರ್ಫಾನ್ ಬೆಳ್ತಂಗಡಿ, ಶರೀಫ್ ಸಂಜಯನಗರ ಹಾಗೂ ಪಟ್ಟಣ ಪಂಚಾಯತ್ ನೌಕರರಾದ ಫ್ರಾನ್ಸಿಸ್ ಬೆಳ್ತಂಗಡಿ ಪಾಲ್ಗೊಂಡಿದ್ದರು.










