Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಕಂದಾಯ ನಿರೀಕ್ಷಕ ಹೆಚ್. ಆರ್ ಪ್ರದೀಶ್ ಉಪ ತಹಶೀಲ್ದಾರ್ ಪದೋನ್ನತಿ

ಬೆಳ್ತಂಗಡಿ ಕಂದಾಯ ನಿರೀಕ್ಷಕ ಹೆಚ್. ಆರ್ ಪ್ರದೀಶ್ ಉಪ ತಹಶೀಲ್ದಾರ್ ಪದೋನ್ನತಿ

3
0

ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕರಾಗಿದ್ದ ಹೆಚ್.ಆರ್ ಪ್ರತೀಶ್ ರವರು ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿ ಬಂಟ್ವಾಳ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ.

ಕಂದಾಯ ಇಲಾಖೆಯಲ್ಲಿ 2002 ರಲ್ಲಿ ಗ್ರಾಮಕರಣಿಕರಾಗಿ ನಾರಾವಿ ಗ್ರಾಮದಲ್ಲಿ ಸರಕಾರಿ ಸೇವೆ ಆರಂಬಿಸಿ ಬಡಗಕಾರಂದೂರು , ಉರುವಾಲು , ಕಣಿಯೂರು , ಬಂದಾರು ಗ್ರಾಮಗಳಲ್ಲಿ ಸೇವೆ ಸಲ್ಲಿಸಿ 2015 ರಲ್ಲಿ ಪದನ್ನೊತಿ ಹೊಂದಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ 2016 ರಲ್ಲಿ ವೇಣೂರು ಹೋಬಳಿ ಕಂದಾಯ ನಿರೀಕ್ಷಕರಾಗಿ , ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷರಾಗಿ 2020 ರ ನಂತರ ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ಆರ್ ಪ್ರತೀಶ್ ರವರನ್ನು ಇದೀಗ ಸರ್ಕಾರದ ನಿಯಮಾವಳಿಗಳಂತೆ ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿ ಬಂಟ್ವಾಳ ತಾಲೂಕು ಕಚೇರಿಯ ಕಂದಾಯ ಶಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here