Home ಅಪಘಾತ ಬಂದಾರು ಬೈಪಾಡಿಯಲ್ಲಿ ಮನೆಯಂಗಳದಲ್ಲಿ ಸ್ಪೋಟ ಬಾಲಕನಿಗೆ ಗಾಯ

ಬಂದಾರು ಬೈಪಾಡಿಯಲ್ಲಿ ಮನೆಯಂಗಳದಲ್ಲಿ ಸ್ಪೋಟ ಬಾಲಕನಿಗೆ ಗಾಯ

4
0

ಬೆಳ್ತಂಗಡಿ : ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಸ್ಫೋಟಕವೊಂದು ಸ್ಫೋಟಗೊಂಡು ಬಾಲಕ ಗಾಯಗೊಂಡು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದ ಬೈಪಾಡಿಯಲ್ಲಿ ಫೆ.18 ರಂದು ಬುಧವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತನೇ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಬಾಲಕ. ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ. ಏನೂ ಅರಿಯದ ಮುಗ್ಧ ಮಕ್ಕಳು.

ಒಬ್ಬ ಬೌಲಿಂಗ್ ಮಾಡಿದ್ದು ಇನ್ನೊಬ್ಬ ಬ್ಯಾಟಿಂಗ್‌ ಮಾಡಿದ ಸಂದರ್ಭಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಎಂಬಾತ ಗಾಯಗೊಂಡಿದ್ದಾನೆ.
ಗಾಯಗೊಂಡ ಬಾಲಕನನ್ನು ಫೆ.19 ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here