Home ಸ್ಥಳೀಯ ಸಮಾಚಾರ ಲಾಯಿಲ ಅಗಳಿ ಪರಿಸರದಲ್ಲಿ ಚಿರತೆ ಓಡಾಟ

ಲಾಯಿಲ ಅಗಳಿ ಪರಿಸರದಲ್ಲಿ ಚಿರತೆ ಓಡಾಟ

4
0


ಬೆಳ್ತಂಗಡಿ: ನಡ ಮತ್ತು ಲಾಯಿಲ ಗ್ರಾಮದ ಗಡಿ ಭಾಗವಾದ ಅಗಳಿಯ ಹೇನಡ್ಕ ಪರಿಸರದಲ್ಲಿ ಶನಿವಾರ ರಾತ್ರಿ ಚಿರತೆ ತಿರುಗಾಟ ನಡೆಸಿದೆ.
ಒಂದು ದೊಡ್ಡ ಚಿರತೆ ಹಾಗೂ ಮರಿ
ಚಿರತೆ ಸಂಚರಿಸಿರುವ ಹೆಜ್ಜೆಗಳು ರಸ್ತೆಯಲ್ಲಿ ಕಂಡು ಬಂದಿವೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 150ಮೀ. ದೂರದಲ್ಲಿ ಹಾಗೂ ಸ್ಥಳೀಯ ಮನೆಗಳಿಂದ 50 ಮೀ.ಪ್ರದೇಶದಲ್ಲಿ ಚಿರತೆ ಸಂಚಾರ ನಡೆಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಪರಿಸರದಲ್ಲಿ ಆಗಾಗ ಚಿರತೆಗಳು ತಿರುಗಾಟ ನಡೆಸುವುದು ಮಾಮೂಲಾಗಿದೆ. ಸ್ಥಳೀಯರು ಭಯದಿಂದ ಜೀವನ‌ ನಡೆಸುವಂತಾಗಿದೆ

LEAVE A REPLY

Please enter your comment!
Please enter your name here