

ಗೇರುಕಟ್ಟೆ: ಇಲ್ಲಿನ ಪರಪ್ಪು ಸಮೀಪ ಗೇರುಕಟ್ಟೆ ಕಡೆಯಿಂದ ನಾಳಕ್ಕೆ ಹೋಗುವ ಸ್ವಿಫ್ಟ್ ಕಾರು ಹಾಗೂ ನಾಳದ ಕಡೆಯಿಂದ ಬರುವ ಬೈಕ್ ಎದುರು ಬದುರಾಗಿ ಡಿಕ್ಕಿ ಹೊಡೆದ ಘಟನೆ ಜ.29 ರಂದು ರಾತ್ರಿ ನಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.








