
ಬೆಳ್ತಂಗಡಿ, ಜ.23:- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ರವರು ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿ ಭೇಟಿ ನೀಡಿ ಅಧ್ಯಕ್ಷರಾದ ಅಕ್ಬರ್ ರವರು ಹಾಗೂ ಸಮಿತಿಯವರೊಂದಿಗೆ ಹೊಸ ವರುಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವ್ಯವಸ್ಥಾಪಕ ನಿರ್ದೇಶಕರಾದ ಡಾ! ಜನಾರ್ದನ್ ಮಾತನಾಡಿ SDM ಸಂಸ್ಥೆಯಲ್ಲಿ ಮಂಗಳೂರಿನಲ್ಲಿ ಸಿಗುವಂತ ವೈದ್ಯಕೀಯ ಸೌಲಭ್ಯ ಹಾಗೂ ವೈದ್ಯರುಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಮ್ ಆರ್ ಐ ಸ್ಕೇನಿಂಗ್ ಈಗಾಗಲೇ ಉಚಿತ ಡಯಾಲಿಸೀಸ್ ಸೌಲಭ್ಯಗಳು ಒದಗಿಸಲಿದ್ದೇವೆ. ಈಗಾಗಲೇ ಹೃದಯ ಸಂಬಂಧಿ ನಾರಾಯಣ ಆಸ್ಪತ್ರೆಯೊಂದಿಗೆ ಮಾತುಕತೆಯಲ್ಲಿದ್ದೇವೆ, ಹೊಸ ಕ್ಯಾತ್ ಲ್ಯಾಬ್ ಮತ್ತು ಎಂ ಆರ್ ಐ ಮಷೀನ್ ಗಳ ಸೇವೆ ಜೂನ್ ನಲ್ಲಿ, ಟ್ರಾಮಾ ಸೆಂಟರ್ ನವೆಂಬರ್ ನಲ್ಲಿ ಸೇವೆ ಆರಂಭ ಆಗಲಿದೆ ಎಂದು ತಿಳಿಸಿದರು. ವೈದ್ಯರುಗಳಾದ ಡಾ! ದೇವೇಂದ್ರ, ಡಾ! ರಾಝಿಕ್, ಖಿಳರ್ ಜುಮ್ಮಾ ಮಸೀದಿ ಖತೀಬರಾದ ಹನೀಪ್ ಫೈಝೀ, ಮಸೀದಿ ಗೌರವ ಅಧ್ಯಕ್ಷರಾದ ಬಿ.ಎಚ್. ಮಹಮ್ಮದ್, ಉಪಾಧ್ಯಕ್ಷರಾದ ಬಿ. ಶೇಖುಂಞ್ಞ, ಕಾರ್ಯದರ್ಶಿಗಳಾದ ಹನೀಪ್ ವರ್ಷಾ, ಸಲಾತ್ ಕಮಿಟಿ ಅಧ್ಯಕ್ಷರಾದ ಹೈದರ್ ಬಿ.ಕೆ. ಮುಹದ್ದೀನ್ ಅಬ್ದುಲ್ ರಹಿಮಾನ್ ಸಖಾಪಿ ಸೈರೋಝ್ ಉದಯ ನಗರ, ಸುಮಂತ್, ಉಮೈರ್ ಉಪಸ್ಥಿತರಿದ್ದರು. ಕೊನೆಯಲ್ಲಿ ಎಸ್.ಡಿ.ಎಮ್ ಸಂಸ್ಥೆಯಿಂದ ಖತೀಬರನ್ನು ಸನ್ಮಾನಿಸಲಾಯಿತು.