
ಬೆಳ್ತಂಗಡಿ: ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘದ ಹೋರಾಟ ಸಮಿತಿ ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತ ಸದಸ್ಯರುಗಳು ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚಿಸುವುದಾಗಿ ಕಳೆದ ಸಹಕಾರಿ ಚುನಾವಣೆಯಲ್ಲಿ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ನಂತರ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಪ್ರಕ್ರಿಯೆಯನ್ನು ಪ್ರಾರಂಭಿಸದೇ ಇರುವುದನ್ನು ವಿರೋಧಿಸಿ ಇಂದು ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತರು ಒಟ್ಟು ಸೇರಿ ಒಂದು ತಿಂಗಳ ಒಳಗೆ ನಮಗೆ ಉತ್ತರ ಕೊಡಬೇಕೆಂದು ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ C E O ಆದ ಶ್ರೀಮತಿ ಮೀರಾ ಮೇಡಂ ರವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳಾದ ಶ್ರೀ ವಿಶ್ವನಾಥ್ ಡೋಂಗ್ರೆ,ಜೆರಾಮ್ ಲೋಬೊ ರವರು, ಶ್ರೀ ರಮಾನಾಥ ಶೆಟ್ರು, ಶ್ರೀ ಅರುಣ್ ಹೆಗ್ಡೆಯವರು,ಜೊಕಿಂ ಕ್ರಾಸ್ತಾ ಅನೆಪಿಲ,ಶ್ರೀ ಸುಂದರ ಹೆಗ್ಡೆಯವರು, ವಿಕ್ಟರ್ ಕ್ರಾಸ್ತಾರು,ಶ್ರೀ ವಸಂತ ಸಾಲಿಯಾನ್ ಮಜ್ಜೇನಿ, ಶ್ರೀ ವಸಂತ ಪೂಜಾರಿ ನೀರ್ ಒಲ್ಬೇ, ಶ್ರೀ ಪುರಂದರ ಪೂಜಾರಿ ಪೇರಾಜೆ, ಶ್ರೀ ರವೀಂದ್ರ ಬಿ ಅಮೀನ್ ಹಾಗೂ ರೈತ ಸದಸ್ಯರುಗಳು ಹಾಜರಿದ್ದರು.