Home ಅಪರಾಧ ಲೋಕ ಬೆಳ್ತಂಗಡಿ :ಮನೆಯಿಂದ ಹೋದ ವೃದ್ಧ  ನಾಪತ್ತೆ

ಬೆಳ್ತಂಗಡಿ :ಮನೆಯಿಂದ ಹೋದ ವೃದ್ಧ  ನಾಪತ್ತೆ

24
0

ಬೆಳ್ತಂಗಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊಕ್ರಾಡಿ ಎಂಬಲ್ಲಿ ಒಬ್ಬರೇ ವಾಸವಾಗಿದ್ದ ರಾಘು ಶೆಟ್ಟಿ @ ಅನ್ನೋಜಿ(70) ಎಂಬವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರು ಆಸ್ಪತ್ರೆಯಿಂದ ಔಷದಿ ಇದ್ದು. ಕಳೆದ ಒಂದೂವರೆ ವರ್ಷಗಳಿಂದ ಕೊಕ್ರಾಡಿ ಚಿಕ್ಕಪ್ಪನೊಂದಿಗೆ ವಾಸವಾಗಿದ್ದರು. ಜ.18 ರಂದು ಸಂಜೆ 3 ಗಂಟೆಗೆ ಯಾರು ಇಲ್ಲದ ವೇಳೆಗೆ ಮನೆಯಿಂದ ಹೊರಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಈತನಕ ಪತ್ತೆಯಾಗದ ಕಾರಣ ವೇಣೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ರಘು ಶೆಟ್ಟಿಯವರ ಮಗ ಹೊಸಂಗಡಿ ಗ್ರಾಮದ ಕುರ್ಲೋಟ್ಟು ನಿವಾಸಿ ಅಶೋಕ್ ಶೆಟ್ಟಿ ಜ.21 ರಂದು ದೂರು ನೀಡಿದ್ದಾರೆ.

ನಾಪತ್ತೆಯಾದ ವೃದ್ಧ ರಾಘು ಶೆಟ್ಟಿ @ ಅನ್ನೋಜಿ ಅವರ ಬಗ್ಗೆ ಮಾಹಿತಿ ಸಿಕ್ಕಿದ್ರೆ ವೇಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here