ಬೆಳ್ತಂಗಡಿ: ದಿನದ ಹಿಂದೆ ನಾಪತ್ತೆಯಾಗಿದ್ದ ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಕಸ್ತೂರಿ (65) ಅವರು ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಇವರು ಉಜಿರೆ, ಬೆಳಾಲು ಕ್ರಾಸ್, ಕಿರಿಯಾಡಿ ಸಮೀಪದಲ್ಲಿ ತಿರುಗಾಡುತ್ತಿದ್ದರು. ಅವರು ನಾಪತ್ತೆಯಾಗಿರುವ ಬಗ್ಗೆ ನಿನ್ನೆಯಷ್ಟೇ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಅವರ ಮೃತದೇಹವು ಮೇ.10ರಂದು ಕಾಶಿಬೆಟ್ಟು ಸನಿಹದ ಅರಳಿ ಎಂಬಲ್ಲಿ ದೊರೆತಿದೆ. ಇದೀಗ ನಾಪತ್ತೆ ಪ್ರಕರಣ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಅಸಹಜ ಸಾವಾಗಿ ಪರಿವರ್ತನೆಯಾಗಿದೆ.
