Home ಅಪರಾಧ ಲೋಕ ಕಳಿಯ ಮೃತಪಟ್ಟ ಬಾಲಕನ ತಲೆಯಲ್ಲಿ ಗಂಭೀರ ಗಾಯ ಕೊಲೆ ಶಂಕೆ ಸ್ಥಳಕ್ಕೆ ಐ.ಜಿ.ಪಿ,‌ ಎಸ್.ಪಿ ಭೇಟಿ

ಕಳಿಯ ಮೃತಪಟ್ಟ ಬಾಲಕನ ತಲೆಯಲ್ಲಿ ಗಂಭೀರ ಗಾಯ ಕೊಲೆ ಶಂಕೆ ಸ್ಥಳಕ್ಕೆ ಐ.ಜಿ.ಪಿ,‌ ಎಸ್.ಪಿ ಭೇಟಿ

3
0

ಬೆಳ್ತಂಗಡಿ: ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐ.ಜಿ.ಪಿ ಯವರು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಮೃತ ಬಾಲಕನ ಮನರಯವರೊಂದಿಗೂ ಮಾತುಕತೆ ನಡೆಸಿದರು ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ಆರಂಭದಲ್ಲಿ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದರೂ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂದು ಬಹುತೇಕ ಕಂಡು ಬರುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

ಜಿಲ್ಲಾ ಪೊಲೀಸ್
ನಾಳ ದೇವಸ್ಥಾನಕ್ಕೆ ಧನು ಪೂಜೆಗೆಂದು ತೆರಳಿದ್ದ
ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15) ಯ ಮೃತದೇಹ ಮನೆಯಿಂದ ಹೋಗುವ ದಾರಿಯ ಬದಿಯ ಕೆರಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿತ್ತು. ಕೆರೆಯ ಬದಿಯಲ್ಲಿ ರಕ್ತ ಬಿದ್ದಿರುವುದು ಕಂಡು ಬಂದಿದ್ದಲ್ಲದೆ ಬಾಲಕನ ತಲೆಯಲ್ಲಿ ಗಾಯಗಳು ಕಂಡು ಬಂದಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here