Home ಸ್ಥಳೀಯ ಸಮಾಚಾರ ಮುಂಡಾಜೆ; ರಬ್ಬರ್ ತೋಟದಲ್ಲಿ ಕಾಣಿಸಿದ ನಾಲ್ಕು ಚಿರತೆಗಳು, ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಅಪಾಯದಿಂದ ಪಾರು

ಮುಂಡಾಜೆ; ರಬ್ಬರ್ ತೋಟದಲ್ಲಿ ಕಾಣಿಸಿದ ನಾಲ್ಕು ಚಿರತೆಗಳು, ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಅಪಾಯದಿಂದ ಪಾರು

6
0

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಮಚ್ಚಿಮಲೆ ಅನಂತ ಭಟ್ ಅವರ ರಬ್ಬರ್ ತೋಟದಲ್ಲಿ ಮೂರು ಮರಿಗಳೊಂದಿಗೆ ತಾಯಿ ಚಿರತೆಯೊಂದು ಕಾಣಿಸಿಕೊಂಡಿದ್ದುಟ್ಯಾಪಿಂಗ್ ಕೆಲಸದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕೆಲಸದವರು ಬೆಳಗ್ಗೆ ತೋಟಕ್ಕೆ ಹೋದಾಗ ಚಿರತೆಗಳು ಕಾಣಿಸಿರುವುದಾಗಿ ತಿಳಿದು ಬಂದಿದೆ. ಅವರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಮುಂಡಾಜೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಟದ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದರು.‌ ಇಲ್ಲೇ ಸಮೀಪದ ಕಾಯರ್ತೋಡಿಯಲ್ಲಿ ನದಿಬದಿಯಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.
ಮರಿಗಳೊಂದಿಗೆ ಚಿರತೆ ಓಡಾಟ ನಡೆಸುತ್ತಿದೆ ಇದು ಜನರು ಭಯ ಮೂಡಲು ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

LEAVE A REPLY

Please enter your comment!
Please enter your name here