
ಬೆಳ್ತಂಗಡಿ; ಧರ್ಮಸ್ಥಳ ಸೈಂಟ್ ಜೋಸೆಫ್ ಫೊರೋನಾ ಚರ್ಚ್ ನ ನವೀಕೃತ ಸ್ಮಶಾನದ ಉದ್ಘಾಟನಾ ಕಾರ್ಯಕ್ರಮ ಡಿ.5 ಸೋಮವಾರ ನಡೆಯಿತು.
ಉದ್ಘಾಟನೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ನೆರವೇರಿಸಿ ಮಾತನಾಡಿ ಅತ್ಯುತ್ತಮವಾದ ಸ್ಮಶಾನವನ್ನು ನಿರ್ಮಿಸಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ ಲಾರೆನ್ಸ್ ಅವರು ಮಾತನಾಡಿ ಶುಭ ಹಾರೈಸಿದರು.
ಧರ್ಮಸ್ಥಳ ಚರ್ಚ್ ನ ಧರ್ಮಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಧರ್ಮಸ್ಥಳ ಸೈಂಟ್ ಜೋಸೆಫ್ ಫೊರೋನಾ ಚರ್ಚಿನ ಪರವಾಗಿ ನೂತನ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಸದಸ್ಯರಾದ ದೇವಸ್ಯ ಟಿ.ವಿ, ರೋಬಿನ್ ಓಡಂಪಳ್ಳಿ, ಜೋಮಿ ಮೇಟಯಿಲ್, ಜೋಷಿ ಮರೋಟಿಕುಡಿ ಹಾಗೂ ಇತರರು ಉಪಸ್ಥಿತರಿದ್ದರು
ಚರ್ಚ್ ಗೇಟ್ ನಿಂದ ನೂತನ ಧರ್ಮಾಧ್ಯಕ್ಷರಿಗೆ ಭವ್ಯ ಸ್ವಾಗತ ಕೋರಲಾಯಿತು.












