
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಶುಕ್ರವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು ಎಸ್.ಐ.ಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿ ಕೊನೆಗೂ ಸೌಜನ್ಯ ಪರ ಹೋರಾಟಗಾರ ಜಯಂತ್.ಟಿ ಅವರ ಕೈ ಸೇರಿದೆ. ಎಸ್.ಐ.ಟಿ 3923 ಪುಟಗಳ ವರದಿಯನ್ನು ಸಲ್ಕಿಸಿದ್ದು ಇದರಲ್ಲಿ 1,100 ಪುಟಗಳನ್ನು ನ್ಯಾಯಾಲಯ ಜಯಂತ್ ಅವರಿಗೆ ನೀಡಿರುವುದಾಗಿ ತಿಳಿದು ಬಂದಿದೆ.
ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ಬಹಿರಂಗ ಗೊಳಿಸದಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿತ್ತು.
ಎಸ್.ಐ.ಟಿ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ದ ಕ್ರಮ ಕೈಗೊಳ್ಳಲು ಅವಕಾಶ ಕೋರಿ ನ್ಯಾಯಾಲಯಕ್ಕೆ ನ 20 ರಂದು ವರದಿ ಸಲ್ಲಿಸಿದ್ದರು.
ಈ ವರದಿಯನ್ನು ಪಡೆಯಲು ಜಯಂತ್ ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಆದರೆ ಎಸ್.ಐ.ಟಿ ಕೋರಿಕೆಯ ಮೇಲೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಆದರೆ ಬಳಿಕ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದಮಂಡಿಸಿದ್ದರು. ಹಾಗೂ ಅಂತಿಮವಾಗಿ ನ್ಯಾಯಾಲಯ ಎಸ್.ಐ.ಟಿ ವರದಿಯನ್ನು ನೀಡಲು ನ್ಯಾಯಾಲಯ ಸಮ್ಮತಿ ಸೂಚಿಸಿತ್ತು.
ಶುಕ್ರವಾರ ನ್ಯಾಯಾಲಯ ಜಯಂತ್.ಟಿ ಅವರಿಗೆ ಎಸ್.ಐ.ಟಿ ವರದಿಯ ಪ್ರಸಕ್ತ ಭಾಗಗಳನ್ನು ನೀಡಿದೆ. ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಹೊರಬರಬೇಕಾಗಿದೆ










