
ಬೆಳ್ತಂಗಡಿ; ಬಹುದಿನಗಳ ಬೇಡಿಕೆಯ ಬಳಿಕ ಬೆಳ್ತಂಗಡಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಿನಲ್ಲಿ ಬಂದ್ ಆಗಿದ್ದು ಜನರಲ್ಲಿ ನಿರಾಸೆ ಮೂಡಿಸಿದೆ.
ಅಕ್ಟೋಬರ್ ತಿಂಗಳಿನಲ್ಲಿ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಅನ್ನು ಉಸ್ತುವಾರಿ ಸಚಿವರು ಉದ್ಘಾಟಿಸಿದ್ದರುಉದ್ಘಾಟನಾ ಭಾಷಣದಲ್ಲಿಯೇ ಸಚಿವರು ಟೆಂಡರು ಪಡೆದವರು ಸಮರ್ಪಕವಾಗಿ ಮಾಡಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು ಇದೀಗ ಮೂರೇ ತಿಂಗಳಲ್ಲಿ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಬಾಗಿಲು ಹಾಕಿದೆ.
ಕಳೆದ ಎರಡು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡದ ಕಾರಣ ಕಾರ್ಮಿಕರು ಕೆಲಸ ಮಾಡದೆ ಇದ್ದು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ
ಗುತ್ತಿಗೆ ದಾರರು ಮತ್ತು ಜಿಲ್ಲಾಡಳಿತದ ನಡುವಿನ ಗೊಂದಲದಿಂದ ಸಮಸ್ಯೆ ನಿರ್ಮಾಣವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಗುತ್ತಿಗೆ ದಾರರು ಸಮರ್ಪಕವಾದ ದಾಖಲೆಗಳನ್ನು ನೀಡದೆ ಇರುವ ಕಾರಣ ಸಮಸ್ಯೆಯಾಗಿದ್ದು ಆತನಿಗೆ ಹಣ ಸಂದಾಯವಾಗುತ್ತಿಲ್ಲ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ ಒಟ್ಟಾರೆಯಾಗಿ ಬೆಳ್ತಂಗಡಿ ಯ ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಲ್ಲಿ ಬಂದ್ ಆಗಿದೆ







