
ಮಡಂತ್ಯಾರು; ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಮಡಂತ್ಯಾರು ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಡಿ14 ರಂದು ಆಯೋಜಿಸಲಾಗಿತ್ತು.
ಸೇಕ್ರೆಡ್ ಹಾರ್ಟ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಸ್ವಾಮಿ ಸ್ಟ್ಯಾನಿ ಗೋವಿಯಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ಕ್ರಿಸ್ತ ಜಯಂತಿ ನಾವು ಡಿಸೆಂಬರ್ 25 ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಧರೆಗೆ ಬಂದದ್ದು ನಮ್ಮನ್ನು ಶ್ರೀಮಂತಗೊಳಿಸಲು. ದೇವರು 2025 ವರ್ಷದ ಹಿಂದೆ ಕಿಸ್ತನ ಜನನದ ಸಂದೇಶ ಸಾರಲು ಕುರುಬರನ್ನು ಮತ್ತು ನಕ್ಷತ್ರವನ್ನು ಮಾಧ್ಯಮವಾಗಿ ಉಪಯೋಗಿಸಿದರು ಕ್ರಿಸ್ಮಸ್ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು” ಎಂದು ಹೇಳಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತನಾಡಿ ಮದರ್ ತೆರೆಜಾರವರು ಮಾನವ ಸೇವೆಯ ಮುಖಾಂತರ ದೇವರ ಸೇವೆ ಮಾಡಿದರು. ಡಿಸೆಂಬರ್ 25 ದೇವ ಮಾನವ ಹುಟ್ಟಿದ ದಿನ. ಜನನ-ಮರಣ ಅದರ ಮಧ್ಯೆ ಜೀವನ. ನಮ್ಮಲ್ಲಿ ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಈ ಕಲ್ಪನೆ ಇರಬೇಕು. ಸಮಾಜದ ಸಾಮರಸ್ಯ ಹಾಳಾಗಬಾರದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲ್ಪಟ್ಟಿರುವುದು, ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.
ಇನ್ನೊರ್ವ ಅತಿಥಿ ಯುನೈಟೆಡ್ ಫ್ರೆಂಡ್ಸ್, ಮಾಲಾಡಿ ಇದರ ಅಧ್ಯಕ್ಷರಾಗಿರುವ ಮಹಮ್ಮದ್ ಆಲಿ ಮಾತನಾಡಿ ಕ್ರಿಸ್ಮಸ್ ಕೇವಲ ಕ್ರಿಸ್ತರ ಹಬ್ಬ ಅಲ್ಲ, ಎಲ್ಲರ ಹಬ್ಬ. ಇದೊಂದು ಸುಂದರವಾದ ಕಾರ್ಯಕ್ರಮ. ಲೋಕದಲ್ಲಿ ಶಾಂತಿ ಸೌಹಾರ್ದತೆ ಮಾತ್ರವಲ್ಲ ‘ ಬಂಧುತ್ವ’ ಸಹ ಮುಖ್ಯವಾಗಿರಬೇಕು. ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೋಗುವುದು. ಈ ರೀತಿ ಶುಭ ಸಂದೇಶವನ್ನು ಮುಂದುವರೆಸಲು ಈ ಒಂದು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೊರ್ವ ಅತಿಥಿ ಮೈಸೂರು ಜಿ. ಕೆ. ಟಯರ್ಸ್ ಇದರ ಮಾಜಿ ಮ್ಯಾನೇಜರ್ ಆದ ಕ್ಲಿಫರ್ಡ್ ಜೇಮ್ಸ್ ಡಿಸೋಜಾ ಮಾತನಾಡಿ ಕ್ರಿಸ್ಮಸ್ ಹಬ್ಬದ ಮುಖ್ಯ ಉದ್ದೇಶ ಶೇರಿಂಗ್ ಮತ್ತು ಕೇರಿಂಗ್. ಕೆಳಗಿನ ಸ್ತರದಲ್ಲಿರುವ ಜನರ ಕಾಳಜಿ ವಹಿಸಿ ನಮ್ಮಲ್ಲಿರುವುದನ್ನು ಅವರಲ್ಲಿ ಹಂಚಬೇಕು ಎಂದು ಹೇಳಿದರು.
ಕಥೋಲಿಕ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಉಪಾಧ್ಯಕ್ಷರಾದ ಲಿಯೋ ರಾಡ್ರಿಗಸ್ ಮಾತನಾಡಿ ಇಂದು ಸಮಾಜದಲ್ಲಿ ಬಂಧುತ್ವ, ಸಾಮರಸ್ಯದ ಬದುಕು ಅಗತ್ಯವಾಗಿದೆ ಎಂದು ಹೇಳಿದರು.
ಬಂದ ಸರ್ವ ಧರ್ಮಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಿ ಗೌರವಿಸಲಾಯ್ತು.
ವೇದಿಕೆಯಲ್ಲಿ ವಿನ್ಸೆಂಟ್ ಡಿಸೋಜಾ, ಜೆರಾಲ್ಡ್ ಮೊರಾಸ್, ಶ್ರೀಮತಿ ಸೆಲೆಸ್ತಿನ್ ಡಿಸೋಜಾ ಉಪಸ್ಥಿತರಿದ್ದರು
ಶ್ರೀ ವಿನ್ಸೆಂಟ್ ಡಿಸೋಜಾ ಸರ್ವರನ್ನು ಸ್ವಾಗತಿಸಿದರು, ರಿಚಾರ್ಡ್ ಮೊರಾಸ್ ವಂದಿಸಿದರು ಶ್ರೀ ವಿನ್ಸೆಂಟ್ ಮೊರಾಸ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು.