
ಮಂಗಳೂರು; ಬೆಂಗಳೂರಿನಿಂದ ಮಾದಕ ವಸ್ತು (MDMA) ಯನ್ನು ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದ ಅಹಮ್ಮದ್ ಶಾಬೀತ್ ಮತ್ತು ತಂಡವನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರ ತಂಡ ಡಿ13 ರಂದು ಕಾರಿನಲ್ಲಿ ಬರುತ್ತಿದ್ದವೇಳೆ , ಅರ್ಕುಳ ಬಳಿ ಬಂಧಿಸಿ ಮಾದಕ ವಸ್ತು ಎಂ.ಡಿ.ಎಂ ಅನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಅಹಮ್ಮದ್ ಈತ ಮೂಲತ (35) ಮಂಗಳೂರು ಮಲ್ಲೂರು ನಿವಾಸಿಯಾಗಿದ್ದು ಇದೀಗ ಬಿ.ಸಿ.ರೋಡ್ ಕೈಕಂಬ ನಿವಾಸಿಯಾಗುದ್ದಾನೆ ಮಹಮ್ಮದ್ ಶಂಶೀರ್ (36) ಮೂಡ ಗ್ರಾಮ, ಜೋಡುಮಾರ್ಗ ಪೋಸ್ಟ್, ಬಂಟ್ವಾಳ ತಾಲೂಕು
ಹಾಗೂ ಶ್ರೀಮತಿ ನೌಶೀನ, (27) ಸರಪಾಡಿ ಪೋಸ್ಟ್ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಎಂಬವರಾಗುದ್ದಾರೆ.
ಆರೋಪಿಗಳಿಂದ MDMA ಮಾದಕ ವಸ್ತು 90 ಗ್ರಾಂ
ಬಿಳಿ ಬಣ್ಣದ KL-58-W-6342 ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಹಮ್ಮದ್ ಶಾಬೀತ್ ಎಂಬುವನು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತುವಾದ MDMA ಯನ್ನು ತಂದು ಸರಬರಾಜು ಮಾಡುತ್ತಿದ್ದು, ಅಲ್ಲದೇ ಈ ತಂಡದಲ್ಲಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯಾದ ಶ್ರೀಮತಿ ನೌಶಿನ ಎಂಬವರನ್ನು ಜೊತೆಗೆ ಇರಿಸಿಕೊಂಡು ಮಾದಕ ವಸ್ತುವಾದ MDMA ಯನ್ನು ಸಾಗಾಟ ಮಾಡುತ್ತಿರುವುದ್ದನ್ನು, ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಕಲೆ ಹಾಕಿ, ಈ ತಂಡವನ್ನು ಈ ದಿನ ದಸ್ತಗಿರಿ ಮಾಡಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಪೊಲೀಸರು
ತನಿಖೆ ಮುಂದುವರೆದಿದೆ.