
ಚಾರ್ಮಾಡಿ: ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಡಿ.3 ರಂದು ಚಾರ್ಮಾಡಿಯಲ್ಲಿ ಸಂಭವಿಸಿದೆ.
ಚಾರ್ಮಾಡಿ ಗ್ರಾಮ ಪಂಚಾಯತದ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಎಂಬವರ ಪುತ್ರ ಮೂರು ವರ್ಷ ಪ್ರಾಯದ ಮಹಮ್ಮದ್ ಹಝೀರಿನ್ ಈ ದುರ್ಘಟನೆಯಲ್ಲಿ ಮೃತ ಪಟ್ಟ ಬಾಲಕನಾಗಿದ್ದಾನೆ. ಬಾಲಕ ಮಹಮ್ಮದ್ ಹಝೀರಿನ್ ತಮ್ಮ ಮನೆಯ ಸಮೀಪ ರಸ್ತೆಯ ಆ ಕಡೆ ಇದ್ದ ಅಂಗಡಿಗೆ ತಿಂಡಿ ತರಲೆಂದು ಹೋಗಿ, ತಿಂಡಿ ತೆಗೆದುಕೊಂಡು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವೇಳ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.




