
ಬೆಳ್ತಂಗಡಿ : ವಯಕ್ತಿಕ ಕಾರಣಗಳಿಂದ ವ್ಯಕ್ತಿಯೊಬ್ಬರು ಮನೆಯ ಕೊಟ್ಟಿಗೆಯ ಪಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕಂಬಳದಡ್ಕ ನಿವಾಸಿ ಅಶೋಕ್(54) ಎಂಬವರು ಯಾವುದೋ ಕಾರಣದಿಂದ ನೊಂದು ನ.30 ರಂದು ಬೆಳಗ್ಗೆ 11:30 ರಿಂದ 2 ಗಂಟೆ ಅವಧಿಯಲ್ಲಿ ಕಂಬಳದಡ್ಕ ಮನೆಯ ಪಕ್ಕದ ಕೊಟ್ಟಿಗೆಯ ಪಕಾಸಿಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ನ.30 ರಂದು ದೂರು ನೀಡಿದ್ದಾರೆ. ಅದರಂತೆ ವೇಣೂರು ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.