Home ಅಪರಾಧ ಲೋಕ ಬೆಳ್ತಂಗಡಿ : ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಸುಳ್ಳು ದಾಖಲೆ ಸೃಷ್ಟಿ; ಆಡಳಿತ ಮಂಡಳಿಯ ನಾಲ್ಕು...

ಬೆಳ್ತಂಗಡಿ : ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಸುಳ್ಳು ದಾಖಲೆ ಸೃಷ್ಟಿ; ಆಡಳಿತ ಮಂಡಳಿಯ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ : ಶಾಲೆ ಆರಂಭಿಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಕಲಿ ದಾಖಲೆ ಸೃಷ್ಟಿಸಿ ಶಿಕ್ಷಣ ಇಲಾಖೆಗೆ ಸಲ್ಲಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ನ ಆಡಳಿತ ಮಂಡಳಿಯ ನಾಲ್ಕು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ‘Infinity learning Foundation, ujire’ ಎಕ್ಸೆಲ್ ಟೆಕ್ನೋ ಸ್ಕೂಲ್- 29244101388) ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ (1) ಸುಮಂತ್ ಕುಮಾರ್ ಜೈನ್ ಬಿ ಮತ್ತು ಸದಸ್ಯರುಗಳಾದ (2) ಸಹನ ಜೈನ್ ಬಿ (3) ಸತೀಶ್ ಕುಮಾರ್ ಜೈನ್ ಬಿ ಮತ್ತು (4) ಶುಭಲತಾ ರವರು ಗುರುವಾಯನಕೆರೆಯಲ್ಲಿ Pre-Primary ಯಿಂದ 10 ನೇ ತರಗತಿ ವರೆಗೆ ಶಾಲೆ ಪ್ರಾರಂಬಿಸಲು ಅನುಮತಿ ಕೋರಿ ದಿನಾಂಕ 27-06-2025 ರಂದು ಅಗತ್ಯ ದಾಖಲೆಗಳನ್ನು ಶಿಕ್ಷಣ ಇಲಾಖೆಯ ಆನ್ ಲೈನ್ ತಂತ್ರಾಂಶದಲ್ಲಿ ದೃಢೀಕರಿಸಿ ಪ್ರಸ್ತಾವನೆ ಸಲ್ಲಿಸಿದ್ದರು ಸದ್ರಿ ಪ್ರಸ್ತಾವನೆಯಲ್ಲಿ ಶಾಲಾ ಕಟ್ಟಡದ ಅಗ್ನಿ ಸುರಕ್ಷತಾ (71(51)/FSR/CC/DFO/MNG/DK/2025) ಕಂಡುಬಂದಿರುತ್ತದೆ. ಆರೋಪಿತರು ಶಾಲೆ ಪ್ರಾರಂಭಿಸಲು ಇಲಾಖೆಯಿಂದ ಅನುಮತಿ ಪಡೆಯುವರೇ ಕರ್ನಾಟಕ ರಾಜ್ಯ ಆಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಿ ವಂಚಿಸಿರುತ್ತಾರೆ.

ಈ ‘Infinity learning Foundation(R) ujire’ ಎಕ್ಸೆಲ್ ಟೆಕ್ನೋ ಸ್ಕೂಲ್’ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಮೇಲೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಶಶಿಧರ ಜಿ. ಎಸ್, ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ದ.ಕ ಮಂಗಳೂರು ಇವರು ನೀಡಿದ ದೂರಿನ ಮೇರೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.6 ರಂದು ಸಂಜೆ ನಾಲ್ಕು ಜನ ಆರೋಪಿಗಳ ವಿರುದ್ಧ BNS -2023 (u/s-318(2),336(3)337,340(2),r/w3(5)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version