Home ಸ್ಥಳೀಯ ಸಮಾಚಾರ ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ; ಅಧ್ಯಕ್ಷರಾಗಿ ಅಲೋಶಿಯಸ್ ಲೋಬೋ ಆಯ್ಕೆ

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ; ಅಧ್ಯಕ್ಷರಾಗಿ ಅಲೋಶಿಯಸ್ ಲೋಬೋ ಆಯ್ಕೆ

23
0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಚುನಾವಣೆಯು ನ.15ರಂದು ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆದಿದ್ದು ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಅಲೋಶಿಯಸ್ ಲೋಬೋ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧಿಗಳ ಅಂತಿಮ ಫಲಿತಾಂಶ ಈರೀತಿಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಅಲೋಶಿಯಸ್ ಎಸ್. ಲೋಬೊ ಮತ್ತು ಕೇಶವ ಪಿ. ನಾಮಪತ್ರ ಸಲ್ಲಿಸಿದ್ದು ಇವರೀರ್ವರಲ್ಲಿ ಅಲೋಶಿಯಸ್ ಎಸ್. ಲೋಬೊ 72 ಮತಗಳನ್ನು ಪಡೆದು ಗೆಲುವನ್ನು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೇಶವ ಪಿ ಕೇವಲ 48 ಮತಗಳನ್ನು ಪಡೆದು 24 ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದ ಕಾರಣ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ಇಲ್ಲದಂತಾಗಿದೆ. ಇನ್ನೂ ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಗೌಡ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಹರ್ಷಿತ್ಯ ಹೆಚ್. ನಾಮಪತ್ರವನ್ನು ಸಲ್ಲಿಸಿದ್ದು ಅವರು ಕೂಡಾ ಅವಿರೋಧ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿ ಸ್ಥಾನಕ್ಕೆ ಮುಮ್ತಾಜ್ ಬೇಗಂ ಮತ್ತು ಸುಜಾತ ನಾಮಪತ್ರ ಸಲ್ಲಿಸಿದ್ದು ಇವರೀರ್ವರಲ್ಲಿ ಮುಮ್ತಾಜ್ ಬೇಗಂ ಗೆಲುವನ್ನು ಸಾಧಿಸಿ ಕೋಶಾಧಿಕಾರಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 15 ವರ್ಷಕ್ಕಿಂತ ಮೇಲ್ಪಟ್ಟು ಸದಸ್ಯತ್ವ ಹೊಂದಿದ ಅನುಭವವುಳ್ಳ ಮೂರು ಸ್ಥಾನಗಳಿಗೆ ಶ್ರೀಕೃಷ್ಣ ಶೆಣೈ ಕೆ., ವಸಂತ ಮರಕಡ, ಸೇವಿಯರ್ ಪಾಲೇಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಹತ್ತು ವರ್ಷಕ್ಕಿಂತ ಮೇಲ್ಪಟ್ಟು 15 ವರ್ಷದೊಳಗೆ ಸದಸ್ಯತ್ವ ಹೊಂದಿದ ಅನುಭವವುಳ್ಳ 3 ಸ್ಥಾನಗಳಿಗೆ ಪ್ರಶಾಂತ್ ಎಂ. ಅಸ್ಮಾ, ದಿನೇಶ್, ಧನಂಜಯ ಕುಮಾರ್ ಡಿ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಪ್ರಶಾಂತ್ ಎಂ, ಅಸ್ಮಾ, ದಿನೇಶ್, ಗೆಲುವನ್ನು ಸಾಧಿಸಿದ್ದಾರೆ.

ಮೂರು ವರ್ಷಕ್ಕಿಂತ ಮೇಲ್ಪಟ್ಟು ಹತ್ತು ವರ್ಷಕ್ಕಿಂತ ಒಳಗೆ ಸದಸ್ಯತ್ವ ಹೊಂದಿದ ಅನುಭವವುಳ್ಳ 4 ಸ್ಥಾನಗಳಿಗೆ ಉಷಾ ಎನ್.ಜಿ, ಸಂದೀಪ್‌ ಡಿ’ಸೋಜ, ಲತಾಶ್ರೀ, ಸೌಮ್ಯ ಪಿ. ಮತ್ತು ಪ್ರಮೀಳಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು, ಉಷಾ ಎನ್.ಜಿ, ಸಂದೀಪ್‌ ಡಿ’ಸೋಜ, ಲತಾಶ್ರೀ, ಸೌಮ್ಯ ಪಿ. ಗೆಲುವನ್ನು ಸಾಧಿಸಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಬದರಿನಾಥ ಎಂ. ಸಂಪಿಗೆತ್ತಾಯ ಕಾರ್ಯ ನಿರ್ವಹಿಸಿದ್ದಾರೆ. ಚಿದಾನಂದ ಪೂಜಾರಿ, ಆನಂದ್ ಕುಮಾರ್ ಎಮ್.ಸಿ. ಮತ್ತು ಜೋಬಿ ಜಾಯ್ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here