ಬೆಳ್ತಂಗಡಿ; ನಗರದ ಹಳೆಕೋಟೆ ಬಳಿ ಕಾರ್ಯನಿರ್ವಹಿಸುತ್ತಿರುವ ಸ್ವಸ್ತಿಕ್ ಅಟೋ ಗ್ಯಾರೇಜ್ ನಲ್ಲಿ ಭಾನುವಾರ ರಾತ್ರಿಯ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ನಷ್ಟವುಂಟಾಗಿದೆ.
ಗ್ಯಾರೇಜ್ ನ ಒಳಗೆ ಕಾಣಿಸಿಕೊಂಡ ಬೆಂಕಿ ವೇಗವಾಗಿ ವ್ಯಾಪಿಸಿದ್ದು ಗ್ಯಾರೇಜ್ ನಲ್ಲಿ ಇದ್ದ ಸಮಾಗ್ರಿಗಳು ಹಾಗೂ ವಾಹನಗಳಿಗೆ ಹೊತ್ತಿಕೊಂಡಿದ್ದು ವ್ಯಾಪಕ ನಷ್ಟಕ್ಕೆ ಕಾರಣವಾಗಿದೆ. ರಾಘವೇಂದ್ರ ಪೂಜಾರಿ ಎಂಬವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ವಾಹನವೊಂದರ ಬ್ಯಾಟರಿ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅನುಮಾನಿಸಲಾಗಿದೆ.
ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿಗಳು ಲಭ್ಯವಾಗಿಲ್ಲ. ಅಗ್ನಿ ಶಾಮಕ ದಳದವರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ಆಕಸ್ಮಿಕದಲ್ಲಿ ಗ್ಯಾರೇಜ್ ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೂ ಹಾನಿಯುಂಟಾಗಿದ್ದು ಮಾರಾಕ್ಕೆ ತಂದಿದ್ದ ವಾಹನಗಳ ಬಿಡಿ ಭಾಗಗಳೂ ಬೆಂಕಿಗೆ ಆಹುತಿಯಾಗಿದೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.
