ಲಾಯಿಲ: ರಾಷ್ಟ್ರೀಯ ಹೆದ್ದಾರಿ ಲಾಯಿಲ ಪ್ರಸನ್ನ ಕಾಲೇಜು ಬಳಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಗಂಭಿರ ಗಾಯಗೊಂಡ ಘಟನೆ ಇಂದು (ಫೆ.21) ಬೆಳಿಗ್ಗೆ ನಡೆದಿದೆ.
ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಮಾಯಾ ನಿವಾಸಿ ಸಂಜೀವ (50) ಎಂದು ತಿಳಿದು ಬಂದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಉಜಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
