ಚಿಕ್ಕಮಗಳೂರು: ಎನ್.ಆರ್.ಪುರ-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲು ಬಳಿ ಶನಿವಾರ ರಾತ್ರಿ ರಸ್ತೆ ದಾಟುತ್ತಿದ್ದ ಕಾಡಾನೆಗೆ ಕಾರು ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಬುರುಗಮನೆ ಗ್ರಾಮದ ಸಮೀಪದ 9ನೇ ಮೈಲಿ ಅರಣ್ಯ ಪ್ರದೇಶ (ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿ)ದಲ್ಲಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದ ವೇಳೆ ಘಟನೆ ನಡೆದಿದೆ.
ಢಿಕ್ಕಿಯ ರಭಸಕ್ಕೆ ಕಾಡಾನೆ ನೇರವಾಗಿ ಕಾರಿನ ಮೇಲೆಯೇ ಬಿದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ವಾಹನದ ಮೇಲೆ ಬಿದ್ದ ಕಾಡಾನೆ ಯಾವುದೇ ದಾಳಿ ಮಾಡದೆ ಎದ್ದು ಅರಣ್ಯದೊಳಕ್ಕೆ ಹಿಂತಿರುಗಿದೆ. ಕಾರಿನಲ್ಲಿದ್ದವರು ಅಪಾಯದಿಂದಪಾರಾಗಿದ್ದಾರೆ
ಘಟನೆಯ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









