Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿಯಾಗಿ ರೋಹಿನಿ ಸಿ.ಕೆ ಅಧಿಕಾರ ಸ್ವೀಕಾರ

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿಯಾಗಿ ರೋಹಿನಿ ಸಿ.ಕೆ ಅಧಿಕಾರ ಸ್ವೀಕಾರ

0

ಬೆಳ್ತಂಗಡಿ : ಹೊಸದಾಗಿ ಆರಂಭವಾಗಿರುವ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್ಪಿಯಾಗಿದ್ದ ರೋಹಿನಿ ಸಿ.ಕೆ. ಅವರನ್ನು ಸರಕಾರ ನೇಮಕ ಮಾಡಿ ನ.4 ರಂದು ಸರಕಾರ ಆದೇಶ ಹೊರಡಿಸಿದ್ದು. ನ.10 ರಂದು ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಅವರು ಅಧಿಕಾರ ಸ್ವೀಕರಿಸಿಕೊಂಡರು.

ಡಿವೈಎಸ್ಪಿ ರೋಹಿನಿ ಸಿ.ಕೆ. 2022 ರ ಬ್ಯಾಚ್‌ನಲ್ಲಿ ನೇರ ನೇಮಕವಾದ ಡಿವೈಎಸ್ಪಿಯಾಗಿದ್ದಾರೆ. ಇವರು ಮೂಲತಃ ಬೆಂಗಳೂರಿನ ಮಲ್ಲೇಶ್ವರಂನವರು. ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕುವಾಗಿರುವ ಬೆಳ್ತಂಗಡಿಗೆ ಮೊದಲ ಬಾರಿಗೆ ಉಪವಿಭಾಗ ತೆರೆಯಲಾಗಿದ್ದು ಮೊದಲ ಡಿವೈಎಸ್ಪಿ ಯಾಗಿ ನೇಮಕಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತನಿರೀಕ್ಷಕರಾದ ಸುಬ್ಬಾಪುರ ಮಠ್, ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ , ಧರ್ಮಸ್ಥಳ , ವೇಣೂರು , ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಳು ಡಿವೈಎಸ್ಪಿ ಸಿ.ಕೆ.ರೋಹಿನಿ ಅವರನ್ನು ಸ್ವಾಗತಿಸಿಕೊಂಡರು.

NO COMMENTS

LEAVE A REPLY

Please enter your comment!
Please enter your name here

Exit mobile version