ಬೆಳ್ತಂಗಡಿ; ಮಾಲಾಡಿ ಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡುವ ಪ್ರಯತ್ನ ನಡೆಸಿದ ಕುಖ್ಯಾತ ಆರೋಪಿಯನ್ನು ಸ್ಥಳೀಯರು ಹಿಡಿದು ಪೂಂಜಾಲಕಟ್ಟೆ ಪೊಲೀಸರಿಗೆ ಒಪ್ಪಿಸಿದ್ದು ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಸಲಾಗಿದೆ.
ಬಂಧಿತ ಆದೋಪಿ ಕೇರಳ ಹಾಗೂ ಕರ್ನಾಟಕ ದ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳಲ್ಲಿ ಆರೋಪಿಯಾಗಿರುವ ತಲಪಾಡಿ ನಿವಾಸಿ ಕಿರಣ್ ಎಂಬಾತನಾಗಿದ್ದಾನೆ.
ಇಲ್ಲಿನ ನಿವಾಸಿ ಪ್ರೇಮಾ ಶೆಟ್ಟಿ ಎಂಬವರು ಕಳೆದ ಕೆಲ ಸಮಯದಿಂದ ವಿದೇಶದಲ್ಲಿ ಇದ್ದು ಮನೆಯಲ್ಲಿ ಯಾರೂ ಇರದ ಕಾರಣ ಮನೆಗೆ ಬೀಗ ಹಾಕಲಾಗಿತ್ತು. ಮನೆಗೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ನ9ರಂದು ಬೆಳಗ್ಗೆ ಪ್ರಮಾಶೆಟ್ಟಿ ಅವರ ಮಗಳು ಸಿಸಿಕ್ಯಾಮೆರಾದಲ್ಲಿ ಗಮನಿಸಿದಾಗ ಯಾರೋ ಅಪರಿಚಿತ ವ್ಯಕ್ತಿ ಕಳ್ಳತನಕ್ಕೆ ಪ್ರಯತ್ನಿಸುತ್ತಿರುವುದು ಕಂಡಿದ್ದು ಕೂಡಲೇ ನೆರೆಮನೆಯ ಪ್ರಕಾಶ್ ಶೆಟ್ಟಿ ಎಂಬವರಿಗೆ ಕರೆ ಮಾಡಿ ಹೇಳಿದ್ದಾರೆ. ಪ್ರಕಾಶ ಶೆಟ್ಟಿ ಸ್ಥಳಕ್ಕೆ ತೆರಳಿ ನೋಡಿದಾಗ ಕಬ್ಬಿಣದ ರಾಡ್ ಹಿಡಿದು ವ್ಯಕ್ತಿಯೊಬ್ಬ ನಿಂತಿರುವುದು ಕಂಡಿದ್ದು ಓಡಿ ತಪ್ಪಿಸಲು ಪ್ರಯತ್ನಿಸಿದ್ದಾನೆ ಪ್ರಕಾಶ್ ಶೆಟ್ಟಿ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಈ ವೇಳೆ ಸ್ಥಳೀಯರು ಸೇರಿ ಅಪರಿಚಿತ ವ್ಯಕ್ತಿಯನ್ನು ಹಿಡಿದು ಪೂಂಜಾಲಕಟ್ಟೆ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಈತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತ ಕೇರಳ ಮೂಲದವನಾಗಿದ್ದು ತಲಪಾಡಿ ನಿವಾಸಿ ಕಿರಣ್ ಎಂಬ ಕುಖ್ಯಾತ ಕಳ್ಳ ಎಂದು ತಿಳಿದು ಬಂದಿದೆ. ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಒಟ್ಟು 13ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿದ್ದು ಪೊಲೀಸರು ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ
