Home ಸ್ಥಳೀಯ ಸಮಾಚಾರ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ‌‌ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ‌‌ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ

0

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಾರ್ತಾಭಾರತಿಯ ಮಂಗಳೂರು ಬ್ಯೂರೋ ಚೀಫ್ ಪುಷ್ಪರಾಜ್ ಬಿ.ಎನ್. ಆಯ್ಕೆಯಾಗಿದ್ದಾರೆ.

ದ.ಕ.ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ 2025-28ನ ಸಾಲಿನ್ ಅಧ್ಯಕ್ಷರಾಗಿ ಆಯ್ಕೆಯಾದರು.

ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಶ್ರವಣ್ ಕುಮಾರ್ ನಾಳ 144 ಮತಗಳನ್ನು ಪಡೆದರು.
ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ನಾಯಕ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಮೂಲದವರಾದ ಟಿ.ವಿ 9 ನ ರಾಜೇಶ್ ಪೂಜಾರಿ ಮತ್ತು ಕೋಶಾಧಿಕಾರಿಯಾಗಿ ವಿಜಯ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಸತೀಶ್ ಇರಾ, ಸಿದ್ದೀಕ್ ನೀರಾಜೆ, ಸುರೇಶ್ ಪಳ್ಳಿ ಗೆಲುವು ಸಾಧಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಳ್ತಂಗಡಿಯ ಭುವನೇಶ್ವರ ಜಿ, ದಿವಾಕರ ಪದ್ಮುಂಜ, ಅಶೋಕ್ ಶೆಟ್ಟಿ ಬಿ.ಎನ್. ಸಂದೇಶ್ ಜಾರ, ಸಂದೀಪ್ ಕುಮಾರ್ ಎಂ. ಲಕ್ಷ್ಮೀನಾರಾಯಣ ರಾವ್, ಹರೀಶ್ ಮೋಟುಕಾನ, ಕಿರಣ್ ಯು. ಸಿರ್ಸಿಕರ್, ಅಭಿಷೇಕ್ ಎಚ್.ಎಸ್., ಜಯಶ್ರೀ, ಸಂದೀಪ್ ವಾಗ್ಲೆ ಹರೀಶ್ ಕೆ.ಆದೂ‌ರ್, ಗಿರೀಶ್ ಅಡ್ಡಂಗಾಯ, ಸಂದೀಪ್ ಸಾಲ್ಯಾನ್, ಆರಿಫ್ ಕಲ್ಕಟ್ಟ ಆಯ್ಕೆಯಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version