ಬೆಳ್ತಂಗಡಿ; ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರು ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣರದ್ದು ಪಡಿಸುವಂತೆ, ಹಾಗೂ ಎಸ್.ಐ.ಟಿ ನೀಡಿರುವ ಸಮನ್ಸ್ ಅನ್ನು ರದ್ದುಪಡಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅ27ರಂದು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಅ 30ರಂದು ಅರ್ಜಿ ವಿಚಾರಣೆ ನಡೆಯಲಿದೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ ಈ ನಾಲ್ಕು ಜನರು ಹೈಕೋರ್ಟ್ ನಲ್ಲಿ ಎಸ್.ಐ.ಟಿ ತಮಗೆ 39/25 ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್.ಎಸ್ 35(3) ಅಡಿಯಲ್ಲಿ ಎಸ್.ಐ.ಟಿ ಅಧಿಕಾರಿಗಳು ನೀಡಿರುವ ಸಮಮನ್ಸ್ ಅನ್ನು ರದ್ದು ಪಡಿಸುಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕ ಸದಸ್ಯ ಪೋಠದ ಮುಂದು ಗುರುವಾರ ಪ್ರಕರಣದ ವಿಚಾರಣೆ ನಡೆಯಲಿದೆ.
ಧರ್ಮಸ್ಥಳ ದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಚಿನ್ನಯ್ಯ ನೀಡಿದ್ದ ಹೇಳಿಕೆಯ ಹಿನ್ನಲೆಯಲ್ಲಿ ಆತ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಜುಲೈ 3ರಂದು
ದಾಖಲಾಗಿರುವ ಮೂಲ ಪ್ರಕರಣ 39/25 ದಾಖಲಿಸಲಾಗಿತ್ತು.
ಇದಾದ ಬಳಿಕ ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯ ತನ್ನ ಹೇಳಿಕೆಯನ್ನು ಬದಲಿಸಿದ್ದ ಈ ಹಿನ್ನಲೆಯಲ್ಲಿ ಇದೇ ಪ್ರಕರಣದಲ್ಲಿ ಆತನನ್ನು ಆರೋಪಿಯೆಂದು ಬಂಧಿಸಲಾಗಿತ್ತು. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಆತ ಸೌಜನ್ಯ ಪರ ಹೋರಾಟಗಾರರ ವಿರುದ್ದವೇ ಹೇಳಿಕೆ ದಾಖಲಿಸಿದ್ದ ಈ ಹಿನ್ನಲೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ, ವಿಠಲ ಗೌಡ, ಅವರನ್ನು ಹಲವು ದಿನಗಳ ಕಾಲ ವಿಚಾರಣೆ ನಡೆಸಿತ್ತು. ಇದೀಗ ಇದೇ ಪ್ರಕರಣದ ಅಪರಾಧ ಸಂಖ್ಯೆಯಲ್ಲಿಯೇ ಇದೀಗ ಎಸ್.ಐ.ಟಿ ಈ ನಾಲ್ವರ ವಿರುದ್ದವೂ ನೋಟೀಸ್ ಜಾರಿ ಮಾಡಿದೆ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲು ಸಿದ್ದತೆ ನಡೆಸಿದೆ. ಇದೀಗ ಮಹೇಶ್ ಶೆಟ್ಟಿ ಹಾಗೂ ಇತರರು ತಮ್ಮ ವಿರುದ್ದ ದಾಖಲಾಗಿರುವ ಎಫ್.ಐ.ಆರ್ ರದ್ದು ಪಡಿಸುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 39/25 ಮೂಲ ಪ್ರಕರಣದ ಆಧಾರದಲ್ಲಿಯೇ ಇವರಿಗೆ ನೋಟೀಸ್ ನೀಡಲಾಗಿದ್ದು ಇದೀಗ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಇವರು ನ್ಯಾಯಾಲಯದಲ್ಲಿ ಬೇಡಿಕೆ ಇಡಲಿದ್ದಾರೆಯೇ ಎಂಬುದು ಕುತೂಹಲದ ವಿಚಾರ. ತಾವೇ ಮುಂದೆ ನಿಂತು ಮಾಡಿದ ಪ್ರಕರಣವನ್ನು ರದ್ದು ಪಡಿಸಲು ತಾವೇ ವಾದ ಮಾಡಲಿದ್ದಾರೆಯೇ ಎಂಬ ಕುತೂಹಲ ಎಸುರಾಗಿದೆ.
ಆರೋಪಿಗಳಿಗೆ ವಿಚಾರಣೆಗಾಗಿ ಅ27ರಂದು ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ಅವರು ನ್ಯಾಯವಾದಿಗಳ ಮೂಲಕ ಸಮಯಾವಕಾಶ ಕೋರಿದ್ದು ಅದರಂತೆ ಶುಕ್ರವಾರ ಹಾಜರಾಗುವಂತೆ ಸೂಚನೆ ನೀಡಿದ್ದರು. ಇದೀಗ ಇವರು ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದು ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದರ ಮೇಲೆ ಎಸ್.ಐ.ಟಿ ಯ ಮುಂದಿನ ನಡೆಗಳು ನಿರ್ಧಾರವಾಗಲಿದೆ.
ನ್ಯಾಯಾಲಯದಲ್ಲಿ ಎಸ್.ಐ.ಟಿ ಇವರ ವಾದವನ್ನು ವಿರೋಧಿಸಲಿದ್ದು ತನಿಖೆಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುವ ಸಾಧ್ಯತೆಯಿದೆ. ಚಿನ್ನಯ್ಯ ದಾಖಲಿಸಿದ್ದ39/25 ಪ್ರಕರಣದ ತನಿಖೆಯ ವೇಳೆ ಕಂಡು ಬಂದ ವಿಚಾರಗಳ ಹಿನ್ನಲೆಯಲ್ಲಿ ಚಿನ್ನಯ್ಯನನ್ನು ಬಂಧಿಸಲಾಗಿತ್ತು ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದೆ ಎಂಬುದು ಎಸ್.ಐ.ಟಿ ಮೂಲಗಳಿಂದ ಲಭಿಸುವ ಮಾಹಿತಿಯಾಗಿದೆ.
