ಬೆಳ್ತಂಗಡಿ; ನೆರಿಯ ಗ್ರಾಮದ ಕಾಟಾಜೆ ಮನೆ ನಿವಾಸಿ ಗಿರಿಜಾ (೬೩) ಎಂಬವರು ಯಾವುದೋ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಘಟನೆ ಅ.೨೮ರಂದು ನಡೆದಿದೆ.
ಅ.22 ರಂದು ಬೆಳಗ್ಗಿನ ಜಾವ ಗಿರಿಜಾ ಅವರು ತನ್ನ ಮನೆಯಲ್ಲಿ ವಿಷ ಪೂರಿತ ಆಹಾರ ಸೇವಿಸಿದ ಪರಿಣಾಮ ಅಸ್ವಸ್ಥರಾಗಿದ್ದು, ಅವರನ್ನು ಮನೆಯವರು ಕೂಡಲೇ ಚಿಕಿತ್ಸೆಗಾಗಿ ಬೇರೆ-ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಮೃತರ ಪುತ್ರಿ ಕಮಲಾ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
