ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದತನಿಖೆ ನಡೆಸುತ್ತಿರುವ ಎಸ್.ಐ.ಟಿ ತನಿಖೆಯ ವ್ಯಾಪ್ತಿಗೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತರುವಂತೆ ಹಾಗೂ ಎಲ್ಲ ಪ್ರಕರಣಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ತನಿಖೆ ತಾರ್ಕಿಕ ಅಂತ್ಯ ಕಾಣುವ ವರೆಗೆ ಎಸ್.ಐ.ಟಿ ಮುಂದುವರಿಸುವಂತೆ ವಿವಿಧ ಮಹಿಳಾ ಸಂಘಟನೆಗಳ ಮುಖಂಡರುಗಳು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಧರ್ಮಸ್ಥಳ ದಲ್ಲಿ ನಡೆದಿರುವ ಎಲ್ಲ ಪ್ರಕರಣಗಳನ್ನು ಎಸ್.ಐ.ಟಿ ವ್ಯಾಪ್ತಿಗೆ ತರಬೇಕು, ಸಿ.ಬಿ.ಐ ಕೋರ್ಟ್ ಹೇಳಿರುವ ತಪಿತಸ್ತ ಅಧಿಕಾರಿಗಳ ಮೇಲಿನ ಕ್ರಮದ ಬಗ್ಗೆಯು ಚರ್ಚಿಸಲಾಯಿತು. ಎಸ್.ಐ.ಟಿ ತನಿಖೆ ತಾರ್ಕಿಕ ಅಂತ್ಯ ಕಾಣುವ ವರೆಗೆ ತನಿಖೆ ಮುಂದುವರಿಸಬೇಕು ಎಂದು ಮನವಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಸ್ವೀಕರಿಸಿ ಎಸ್.ಐ.ಟಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಮಹಿಳಾ ಮುಖಂಡರುಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಮುಳಂಡರುಗಳಾದ ಚಂಪಾವತಿ, ಮಧು ಭೂಷಣ್, ಶಕುನ್, ಮಾಯಾರಾವ್, ಗೌರಮ್ಮ, ಜ್ಯೋತಿ ಅನಂತ ಸುಬ್ಬರಾವ್, ಮಮತಾ ಯಜಮಾನ್, ಮಲ್ಲಿಗೆ ಸಿರಿಮನೆ, ಗೀತಾ, ಸುಜಾತಾ ಹಾಗೂ ಇತರರು ಇದ್ದರು.
