Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಹುಣಸೆಕಟ್ಟೆ ಕ್ರಾಸ್ ಗೇರುಕಟ್ಟೆ ಪರಪ್ಪು ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ

ಬೆಳ್ತಂಗಡಿ ಹುಣಸೆಕಟ್ಟೆ ಕ್ರಾಸ್ ಗೇರುಕಟ್ಟೆ ಪರಪ್ಪು ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ

0

ಬೆಳ್ತಂಗಡಿ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾಗಿದ್ದ ಬೆಳ್ತಂಗಡಿ ನಗರದಿಂದ , ಕೆಇಬಿ ಮಾರ್ಗವಾಗಿ ಹುಣ್ಸೆಕಟ್ಟೆ ಕ್ರಾಸ್, ಗೇರುಕಟ್ಟೆ ಪರಪ್ಪು,ಅದುರ್ ಪೆರಾಲ್ ಮಾರ್ಗವಾಗಿ ಕೊಯ್ಯೂರಿಗೆ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನು ಇಟ್ಟುಕೊಂಡು ಇಂದಿನಿಂದ ಸರ್ಕಾರಿ  ಬಸ್ ಸಂಚಾರ ಪ್ರಾರಂಭವಾಗಿದೆ.
ನೂತನವಾಗಿ ಪ್ರಾರಂಭಗೊಂಡ ಬಸ್ಸಿಗೆ ಕೊಯ್ಯರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅದ್ದೂರಿ ಸ್ವಾಗತವನ್ನು ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್, ಸದಸ್ಯರಾದ ಶರೀಫ್ ಶಬರಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ ಕೊಯ್ಯರು, ಕೊಯೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹರೀಶ್ ಗೌಡ, ಸದಸ್ಯರಾದ. ಲೋಕೇಶ್ ಗೌಡ, ಲತೀಫ್ ಉನಾಲು, ಶ್ರೀಮತಿ ಚಂದ್ರಾವತಿ, ಶ್ರೀಮತಿ ಹೇಮಾವತಿ, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ವೆಂಕಣ್ಣ ಕೊಯ್ಯಾರು, ಶಾಲಾ ಉಪನ್ಯಾಸಕರಾದ ಮೋಹನ್ ಗೌಡ, ರಾಮಚಂದ್ರ ದೊಡ್ಮನಿ, ಪ್ರಮುಖರಾದ ನವೀನ್ ಕುಮಾರ್ ಮೊಹಮದ್ ಸಿದ್ದಿಕ್, ಪರಮೇಶ್ವರ್ ಗೌಡ, ಸಲೀಂ ಪಾತ್ರಾಲಾ, ಕೃಷ್ಣಕುಮಾರ್,
ಡಿಕಯ್ಯ, ಯೂಸುಫ್, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version