
ಬೆಳ್ತಂಗಡಿ : ಉಜಿರೆಯ ಖಾಸಗಿ ಕ್ಲಿನಿಕ್ ಗೆ ತೆರಳಿ ಎಸ್.ಐ.ಟಿ ಅಧಿಕಾರಿಗಳಿ ಇವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಸ್.ಕೆ.ಮೆಮೋರಿಯಲ್ ಹಾಲ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಖಾಸಗಿ ದಂತ ಚಿಕಿತ್ಸಾಲಯಕ್ಕೆ ಎಸ್.ಐ.ಟಿ ತಂಡ ಜೊತೆ ಎಫ್ಎಸ್ಎಲ್ ವಿಭಾಗದ ಸೋಕೋ ತಂಡ ಶನಿವಾರ ಮಧ್ಯಾಹ್ ದ ವೇಳೆ ತೆರಳಿದ್ದು ಇಲ್ಲಿನ ವೈಧ್ಯರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದಾರೆ. ಬುರುಡೆಯೊಂದಿಗೆ ಸಿಕ್ಕಿರುವ ಹಲ್ಲುಗಳ ಬಗ್ಗೆ ಯಾವದೋ ಮಾಹಿತಿ ಪಡೆಯುವುದಕ್ಕಾಗಿ ಅಧಿಕಾರಿಗಳು ಡಾ.ದಯಕರ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿಗಳು ಲಭ್ಯವಾಗುತ್ತದೆ. 2.45 ರ ಸುಮಾರಿಗೆ ಎಸ್.ಐ.ಟಿ ಅಧಿಕಾರಿಗಳು ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹಿಸುವ ಕಾರ್ಯ ಮುಗಿಸಿ ಹಿಂತಿರುಗಿದ್ದಾರೆ.
ಎಸ್.ಐ.ಟಿ ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ಪತ್ತೆಯಾಗಿರುವ ಒಂಬತ್ತು ಮಾನವ ಅವಶೇಷಗಳ ಮೂಲವನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಯುತ್ತಿದೆ