Home ಅಪಘಾತ ಮುಂಡಾಜೆ: ತೆರೆದ ಚರಂಡಿಗೆ ಬಿದ್ದು ಶಿಕ್ಷಕನಿಗೆ ಗಾಯ

ಮುಂಡಾಜೆ: ತೆರೆದ ಚರಂಡಿಗೆ ಬಿದ್ದು ಶಿಕ್ಷಕನಿಗೆ ಗಾಯ

0


ಬೆಳ್ತಂಗಡಿ:ಬ್ಯಾನರ್ ಕಟ್ಟುವ ವೇಳೆ ತೆರೆದ ಚರಂಡಿಗೆ ಬಿದ್ದ ಶಿಕ್ಷಕರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮುಂಡಾಜೆ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದ ಬ್ಯಾನರನ್ನು ಮಂಗಳೂರು-ವಿಲ್ಲುಪುರಂ ಹೆದ್ದಾರಿಯ ಸೋಮಂತಡ್ಕ ರಸ್ತೆ ಬದಿಯ ಪ್ರದೇಶದಲ್ಲಿ ಅಳವಡಿಸಲು ಸ್ವಯಂಸೇವಕರ ಜತೆ ಗುರುವಾರ ಸಂಜೆ ಶಿಕ್ಷಕ ತೆರಳಿದ್ದರು. ಬ್ಯಾನರ್ ಕಟ್ಟುವ ಸಮೀಪ ತೆರೆದ ಚರಂಡಿ ಗಮನಕ್ಕೆ ಬರದ ಕಾರಣ ಸುಮಾರು 6 ಅಡಿ ಆಳಕ್ಕೆ ಬಿದ್ದು ಕಾಲಿಗೆ ಗಂಭೀರ ಸ್ವರೂಪದ ಗಾಯಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೆರೆದ ಚರಂಡಿ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂಗವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ರಸ್ತೆ ಬದಿ ಚರಂಡಿಗಳನ್ನು ನಿರ್ಮಿಸಲಾಗಿದ್ದು ಇದನ್ನು ಸಂಪೂರ್ಣ ಮುಚ್ಚಲಾಗಿಲ್ಲ ಚರಂಡಿ ಭಾಗ ಅಲ್ಲಲ್ಲಿ ತೆರೆದುಕೊಂಡಿದ್ದು ಈಗಾಗಲೇ ಹಲವರು ಬಿದ್ದು ಗಾಯಗೊಂಡಿದ್ದಾರೆ.ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವರಿಕೆ ಮಾಡಲಾಗಿದೆ. ಸಂಬಂಧಪಟ್ಟವರು ಒಂದೆರಡು ಕಡೆ ಮಾತ್ರ ಸ್ಲ್ಯಾಬ್ ಅಳವಡಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳಲ್ಲಿ ಗೊಂದಲ ಉಂಟಾಗುತ್ತಿದ್ದು ಚರಂಡಿಗೆ ಬಿದ್ದು ಗಾಯಗೊಳ್ಳುತ್ತಿರುವುದು ಮುಂದುವರೆದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version