
ಬೆಳ್ತಂಗಡಿ; ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ 48 ವರ್ಷ ಪ್ರಾಯದ ಜೀವನ್ ಪಿಂಟೋ ಅವರು ನಾಪತ್ತೆಯಾಗಿದ್ದ ಪ್ರಕರಣ ದುಃಖಾಂತ್ಯ ಕಂಡಿದ್ದು, ಇಂದು ಆಗಸ್ಟ್ 3ರಂದು ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.
ಅವರು ತೋಡಿನಲ್ಲಿ ಕಾಲು ಜಾರಿ ಬಿದ್ದಿರಬಹುದೆಂಬ ಶಂಕೆಯ ಮೇರೆಗೆ ತಕ್ಷಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಲಾಯಿತು. ಸ್ಥಳೀಯರ ಸಹಕಾರದೊಂದಿಗೆ ಶನಿವಾರ ರಾತ್ರಿಯಿಂದಲೇ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಭಾರೀ ಮಳೆ ಹಾಗೂ ನೀರಿನ ತೀವ್ರ ಹರಿವಿನಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾದರೂ, ತಂಡಗಳು ಹುಡುಕಾಟ ಮುಂದುವರಿಸಿದ್ದವು. ಇದೀಗ ಅವರಮೃತದೇಹ ಪತ್ತೆಯಾಗಿದೆ