Home ಸ್ಥಳೀಯ ಸಮಾಚಾರ ನ್ಯಾಯಾಧೀಶರಮೇಲೆ ಷೂ ಎಸೆದವನನ್ನು ದೇಶದಿಂದ ಗಡಿಪಾರು ಮಾಡಿ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ಒತ್ತಾಯ ತಹಶೀಲ್ದಾರರಿಗೆ ಮನವಿ

ನ್ಯಾಯಾಧೀಶರಮೇಲೆ ಷೂ ಎಸೆದವನನ್ನು ದೇಶದಿಂದ ಗಡಿಪಾರು ಮಾಡಿ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ಒತ್ತಾಯ ತಹಶೀಲ್ದಾರರಿಗೆ ಮನವಿ

0

ಬೆಳ್ತಂಗಡಿ; ಭಾರತದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ರವರ ಮೇಲೆ ಷೂ ಎಸೆದ ಆರೋಪಿ ರಾಕೇಶ್ ಕುಮಾರ್ ನನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮುಖಂಡರುಗಳು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಬೆಳ್ತಂಗಡಿ ತಾಲೂಕು ಕಚೇರಿಗೆ ಆಗಮಿಸಿದ ಸಂಘಟನೆಯ ಮುಖಂಡರುಗಳು ಸಾಂಕೇತಿಕವಾಗಿ ಘಟನೆಯ ಬಗ್ಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಮೂಲಕ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವರಿಗೆ ಮನವಿ ಸಲ್ಲಿಸಿದರು.
ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ಸಂವಿಧಾನಕ್ಕೆ ನ್ಯಾಯಾಂಗಕ್ಕೆ ಮಾಡಿದ ಅವಮಾನವಾಗಿದ್ದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಾಶಪಡಿಸುತ್ತದೆ. ಇಂತಹ ಕೃತ್ಯವನ್ನು ಎಸಗಿದಾತನ ಮೇಲೆ ಕೂಡಲೇ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು , ಭಾರತೀಯ ಬಾರ್ ಕೌನ್ಸಿಲ್ ಈತನ ಪರವಾನಗಿಯನ್ನು ರದ್ದು ವಕೀಲಿ ವೃತ್ತಿಯಿಂದ ವೃತ್ತಿಯಿಂದ ವಜಾಗೊಳಿಸಬೇಕು , ದೇಶದ ಯಾವುದೇ ನ್ಯಾಯಾಲಯ , ನ್ಯಾಯ ಮಂಡಳಿ , ಕಾನೂನು ಪ್ರಾಧಿಕಾರದಲ್ಲಿ ವಕಾಲತ್ತು ನಡೆಸದಂತೆ ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ‌. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ
ಬಿ.ಕೆ.ವಸಂತ್ ಬೆಳ್ತಂಗಡಿ,ಶೇಖರ್ ಕುಕ್ಕೇಡಿ,ರಮೇಶ್ ಆರ್ ಬೆಳ್ತಂಗಡಿ
ಶ್ರೀಧರ್ ಕಳೆಂಜನಾರಾಯಣ ಪುದುವೆಟ್ಟು, ಅಬ್ದುಲ್ ರಹಿಮಾನಗ ಪಡ್ಪುಸುಂದರ ನಾಲ್ಕೂರುಶೀನ ಮಕ್ಕೀಜೆ
ಶೇಖರ್ ಕೊಯ್ಯೂರುಯತೀಶ್ ಧರ್ಮಸ್ಥಳಹರೀಶ್ ಉಜಿರೆ
ಬಾಬು ಗೇರುಕಟ್ಟೆ,ಉಮೇಶ್ ಕೆಸ್ಸಾರ್ಟಿಸಿ
ಶ್ವೇತ ವಕೀಲರು ಸುಮಾ ವಕೀಲರು
ಸುದರ್ಶನ್ ಮಂಜಿಲವಿಠ್ಠಲ ಸಾವ್ಯ
ರಾಜೇಶ್ ಭಟ್ ಸವಣಾಲು
ಕಿರಣ್ ವಕೀಲರು ಸವಣಾಲು
ಶೇಖರ್ ಲಾಯಿಲಯಮುನಾ ಲಾಯಿಲ.
ಶೀನಪ್ಪ ಮಲೆಬೆಟ್ಟು ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version