Home ಸ್ಥಳೀಯ ಸಮಾಚಾರ ಶಿಬಾಜೆ; ಅರಣ್ಯ ಇಲಾಖೆ ಕೃಷಿ ನಾಶಮಾಡಿದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

ಶಿಬಾಜೆ; ಅರಣ್ಯ ಇಲಾಖೆ ಕೃಷಿ ನಾಶಮಾಡಿದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

30
0

ಬೆಳ್ತಂಗಡಿ: ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಕಳೆದ ಹಲವು ದಶಕಗಳಿಂದ ವಾಸವಿದ್ದ ಒ. ಪಿ. ಜಾರ್ಜ್ ಅವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಅ.6ರಂದು ಶಾಸಕ ಹರೀಶ್ ಪೂಂಜ ಅವರು ಪ್ರದೇಶಕ್ಕೆ ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿದರು.
ಶಿಬಾಜೆ ಗ್ರಾಮದಲ್ಲಿ 184ಸರ್ವೇ ನಂಬರ್ ನಲ್ಲಿ ಸುಮಾರು 80ಕ್ಕೂ ಹೆಚ್ಚಿನ ಕುಟುಂಬ ವಾಸವಿದ್ದು ಇದರಲ್ಲಿ ಹೆಚ್ಚಿನವರು ಜೀವನಕ್ಕೆ ಇದೇ ಭೂಮಿಯನ್ನು ನಂಬಿಕೊಂಡು ಇಲ್ಲಿ ಕೃಷಿ ಮಾಡಿ ಜೀವನ ಮಾಡುತ್ತಿದ್ದಾರೆ. ಇದೀಗ ಅರಣ್ಯ ಇಲಾಖೆ ಏಕಾಏಕಿ ಒಬ್ಬ ಕೃಷಿಕನ ಜಾಗವನ್ನು ವಶಪಡಿಸಿಕೊಂಡಿದೆ.
ಏಕಾ ಏಕಿ ಅರಣ್ಯ‌ ಇಲಾಖೆ ಕೃಷಿಕರು ಈ ಪ್ರದೆಶವನ್ನು ತೆರವುಗೊಳಿಸಿ ಎಂದು ಹೇಳಿದರೆ ಜೀವನವೇ ಬುಡ ಮೇಲಾಗುತ್ತದೆ. ಇದರಿಂದ ದೊಡ್ಡ ಸಮಸ್ಯೆಗಳೇ ಉದ್ಭವ ಆಗುತ್ತದೆ‌ ಬದುಕಲು ನಮಗೆ ಬೇರೆ‌ದಾರಿಯೇ ಇಲ್ಲ ಎಂದು ಶಾಸಕರ ಬಳಿ ಸ್ಥಳೀಯರು ಕಷ್ಟ ತೋಡಿ ಕೊಂಡರು.
ಶಾಸಕರು ಮಾತನಾಡಿ ಎಲ್ಲಾ 184ಸರ್ವೇ ನಂಬರ್ ನಲ್ಲಿ ವಾಸ ಮಾಡುವವರ ಜೊತೆ ನಾನಿದ್ದೇನೆ. ಎಲ್ಲರು ಒಟ್ಟಾಗಿ ತಮ್ಮಲ್ಲಿರುವ ದಾಖಲೆಗಳನ್ನು ನೀಡಿ ಹೈಕೋರ್ಟಿನಲ್ಲಿ ಇಂಜಕ್ಷನ್ ಆದೇಶ ಪಡೆಯುವ ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಮಾಜಿ ಅಧ್ಯಕ್ಷ ರತೀಶ್‌ ಬಿ, ಮಾಜಿ ಉಪಾಧ್ಯಕ್ಷ ವಿನಯಚಂದ್ರ ಟಿ., ಶಿಶಿಲ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂದೀಪ್, ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here