
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯ ನ್ಯಾಯಾಲಯಕ್ಕೆ ಹೋಗುವ ಮೊದಲು ಆತನ ಸಂದರ್ಶನ ಮಾಡಿದ್ದ ಯುಟ್ಯೂಬರ್ ಗಳಿಗೆ ಎಸ್.ಐ.ಟಿ ಕಚೇರಿಗೆ ಅ.3 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಯಲ್ಲಿ ಹೋರಾಟಗಾರ ಜಯಂತ್.ಟಿ ಮಗ ಜೀವನ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿರುವುದಾಗಿ ತಿಳಿದು ಬಂದಿದೆ.
ಚಿನ್ಯಯ್ಯ ಆರೋಪಿಯಾಗಿ ಜೈಲಿಗೆ ಹೋದ ಬೆನ್ನಲ್ಲಿಯೇ ಆತ ಹಿಂದೆ ನೀಡಿದ್ದ ಸಂದರ್ಶನಗಳು ಒಂದೊಂದಾಗಿ ವಿವಿಧ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ
ಯೂಟ್ಯೂಬರ್ ಗಳಾದ ಡಿ ಟಾಸ್ಕ್ ಯೂಟ್ಯೂಬರ್ ದಿನೇಶ್, ದೂತ ಯೂಟ್ಯೂಬರ್ ಸಮೀರ್.ಎಮ್.ಡಿ , ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಸಂತೋಷ್ ಕಡಬ, ಕುಡ್ಲ ರಾಮ್ ಪೇಜ್ ಯೂಟ್ಯೂಬರ್ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್ ಸೇರಿ ಒಟ್ಟು ಆರು ಮಂದಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.
ಹೋರಾಟಗಾರ ಜಯಂತ್.ಟಿ ಮಗ ಜೀವನ್ ಪ್ರಕರಣದ ಆರೋಪಿ ಚಿನ್ನಯ್ಯನ ವಿಡಿಯೋ ಮಾಡಿದ್ದ ಎನ್ನಲಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಲು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.