ಬೆಳ್ತಂಗಡಿ : ರಾಜ್ಯದ ಎಲ್ಲಾ ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಗೌರವಧನ ಮಂಜೂರು ಮಾಡಲಾಗಿದೆ.ಇದಕ್ಕಾಗಿ ರಾಜ್ಯ ಸರಕಾರವನ್ನು ಅಭೊನಂದಿಸುವುದಾಗಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂತಿಳಿಸಿದ್ದಾರೆ.
ಪ್ರಧಾನ ಅರ್ಚಕರುಗಳಿಗೆ 6000 ಸಾವಿರ ಮತ್ತು ಸಹಾಯಕ ಅರ್ಚಕರಿಗೆ 5000. ಜೈನ ಸಮುದಾಯದ ಅಭಿವೃದ್ಧಿ ಯೋಜನೆಯಡಿ ನೋಂದಾಯಿತ ಜೈನ ಬಸದಿಗಳಲ್ಲಿರುವ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಅವರ ದೈನಂದಿನ ನಿರ್ವಹಣೆಗೆ ಅನುಕೂಲವಾಗುವಂತೆ ಮಂಜೂರು ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸರ್ವ ಧರ್ಮದ ಅಭಿವೃದ್ಧಿಗೆ ತೆಗೆದುಕೊಂಡು ಇರುವಂತಹ ಈ ನಿರ್ಧಾರವನ್ನು ಸ್ವಾಗತಿಸಿ ಅಭಿನಂದನೆಯನ್ನು ಸಲ್ಲಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ
