Home ಸ್ಥಳೀಯ ಸಮಾಚಾರ ಧರ್ಮಸ್ಥಳ; ಹದಗೆಟ್ಟ  ನೇರ್ತನೆ ರಸ್ತೆ ಶ್ರಮದಾನದ ಮೂಲಕ ದುರಸ್ತಿ

ಧರ್ಮಸ್ಥಳ; ಹದಗೆಟ್ಟ  ನೇರ್ತನೆ ರಸ್ತೆ ಶ್ರಮದಾನದ ಮೂಲಕ ದುರಸ್ತಿ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇರ್ತನೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಸೆ 21ಭಾನುವಾರ ದಂದು ಸ್ಥಳೀಯರು ಒಟ್ಟು ಸೇರಿ ಶ್ರಮದಾನದ ಮೂಲಕ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದಾರೆ.
ಕಳೆದ ಮಳೆಗಾಲದಲ್ಲಿ ದೊಡ್ಡ ಗಾತ್ರಗಳ ಹೊಂಡಗಳು ಬಿದ್ದಿದ್ದು ವಾಹನಗಳ ಸಂಚಾರ ಅಸಾಧ್ಯವಾದ ಹಿನ್ನಲೆಯಲ್ಲಿ ಸ್ಥಳೀಯರು ಈ ಬಗ್ಗೆ ವಾರ್ಡ್ ಸಭೆಯಲ್ಲಿ ಗಮನಸೆಳೆದಿದ್ದರು . ಒಂದೇ ವಾರದಲ್ಲಿ ದುರಸ್ತಿ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಆದರೆ ಈ ವೆರಗೂ ಯಾವುದೇ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಮಾಜಿ ಗ್ರಾಮಪಂಚಾಯತು ಸದಸ್ಯ ಟಿ.ವಿ ದೇವಸ್ಯ ಅವರ ನೇತೃತ್ವದಲ್ಲಿ ಸ್ಥಳೀಯರು ಶ್ರಮದಾನ ನಡೆಸಿದರು. ಇಡೀ ರಸ್ತೆಯ ಹೊಂಡಗಳನ್ನು ಕಲ್ಲು ಹುಡಿಯಿಂದ ತುಂಬಿ ಸಂಚಾರಕ್ಕೆ ಯೋಗ್ಯ ಮಾಡುವ ಕಾರ್ಯ ನಡೆಯಿತು
ಶ್ರಮದಾನದಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗಿಗಳಾದರು.

NO COMMENTS

LEAVE A REPLY

Please enter your comment!
Please enter your name here

Exit mobile version