
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯ ಮತ್ತು ಆತನ ಪತ್ನಿ ಮಲ್ಲಿಕಾ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಸೆ.22 ರಂದು ಉಜಿರೆ ನಿವಾಸಿ ಯೊಬ್ಬನನ್ಮು ಎಸ್.ಐ.ಟಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಉಜಿರೆ ನಿವಾಸಿ ನಿತಿನ್ ಎಂಬಾತನನ್ನು ಎಸ್.ಐ.ಟಿ ನೋಟಿಸ್ ನೀಡಿ ವಿಚಾರಣೆ ಕರೆಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮಹೇಶ್ ಶೆಟ್ಟಿ ಅವರೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ
ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಎಸ್.ಐ.ಟಿ ಬ್ಯಾಂಕ್ ದಾಖಲೆಗಳನ್ನು ತೆಗೆದುಕೊಂಡಿದ್ದು ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಹಣ ವರ್ಗಾವಣೆ ಮಾಡಿದ್ದನ್ನು ನಿತಿನ್ ಒಪ್ಪಿಕೊಂಡಿದ್ದು ಆತನ ಮೊಬೈಲ್ ಕೂಡ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.