
ಬೆಳ್ತಂಗಡಿ; ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧದ ವೇಳೆ ಮತ್ತೆ ಎರಡು ತಲೆ ಬುರುಡೆಗಳು ಪತ್ತೆಯಾಗಿರುವುದಾಗಿ ಎಸ್.ಐ.ಟಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.
ಬಂಗ್ಲೆ ಗುಡ್ಡದಲ್ಲಿ ಬುಧವಾರವೂ ಹಲವು ತಲೆ ಬುರುಡೆಗಳು ಪತ್ತೆಯಾಗಿದ್ದವು. ಬುಧವಾರ ಗುರುತಿಸಿದ ಜಾಗದಲ್ಲಿ ಇಂದು ಪರಿಶೀಲನೆ ನಡೆಸಲಾಗಿದ್ದು ಅಲ್ಲಿ ಇನ್ನೆರಡು ಬುರುಡೆಗಳು ಹಾಗೂ ಅವಶೇಷಗಳು ಪತ್ತೆಯಾಗಿದ್ದು ಇಂದು ಅದನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ.
ಗುಡ್ಡದಮೇಲೆ ಚದುರಿಕೊಂಡ ರೀತಿಯಲ್ಲಿ ಎಲಿಬುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು ಅಲ್ಲಿ ಲಭಿಸಿದ ಎಲ್ಲ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಮಾಡಿದೆ
ಇದೀಗ ಒಟ್ಟು ಗುರುತಿಸಿದ ಸ್ಥಳಗಳಿಂದ 7ತಲೆಬುರುಡೆಗಳು ಪತ್ತೆಯಾಗಿದ್ದು ಸಾಕಷ್ಟು ಎಲುಬಿನ ಭಾಗಗಳು ಲಭಿಸಿದೆ