Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿ ತಂಡದಿಂದ ಎರಡನೇ ದಿನದ ಕಾರ್ಯಾಚರಣೆ ಆರಂಭ

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿ ತಂಡದಿಂದ ಎರಡನೇ ದಿನದ ಕಾರ್ಯಾಚರಣೆ ಆರಂಭ

0

ಬೆಳ್ತಂಗಡಿ : ಅಸ್ಥಿಪಂಜರ ಶೋಧಕ್ಕಾಗಿ ಎರಡನೇ ದಿನದ ಕಾರ್ಯಾಚರಣೆಗೆ ಬಂಗ್ಲೆಗುಡ್ಡೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಇಳಿದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಸೆ‌.18 ರಂದು 12:30 ಕ್ಕೆ ವೈದ್ಯರ ತಂಡ, ಎಫ್.ಎಸ್‌.ಎಲ್ ತಂಡದ ಸೋಕೊ ಸಿಬ್ಬಂದಿ,, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧಿಕಾರಿಗಳು, ಕಾರ್ಮಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಒಂದಿಷ್ಟು ಅವಶೇಷಗಳು ಪತ್ತೆಯಾಗಿತ್ತು. ಅದೇರೀತಿ ಕೆಲವು ಸ್ಥಳಗಳನ್ನು ಗುರುತಿಸಲಾಗಿತ್ತು ಗುರುತಿಸಿದ ಸ್ಥಲದಲ್ಲಿ ಅವಶೇಷಗಳಿವೆ ಎನ್ನಲಾಗಿದ್ದು ಇದನ್ನು ಸಂಗ್ರಹಿಸುವ ಕಾರ್ಯ ನಡೆಸಲಿದೆ ಅದೇರೀತಿ ಇನ್ನು ಅರಣ್ಯದ ಇತರ ಭಾಗಗಳಲ್ಲಿ ಹೊಸದಾಗಿ ಹುಡುಕಾಟವನ್ನೂ ನಡೆಸಲಿದೆ. ಹೊಸ ಸ್ಥಳಗಳನ್ನು ಗುರುತಿಸದರೆ ಅದನ್ನು ಮಾರ್ಕ್ ಮಾಡಲು ನಂಬರ್ ಗಳನ್ನು ತಂಡ ಕೊಂಡೊಯ್ದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version