Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಪ್ರಕರಣ ಮಹತ್ವದ ಬೆಳವಣಿಗೆ; ಇಡೀ ಬಂಗ್ಲೆ ಗುಡ್ಡೆ ಅರಣ್ಯ ಪರಿಶೀಲನೆ ಆರಂಭಿಸಿದ ಎಸ್.ಐ.ಟಿ

ಧರ್ಮಸ್ಥಳ ಪ್ರಕರಣ ಮಹತ್ವದ ಬೆಳವಣಿಗೆ; ಇಡೀ ಬಂಗ್ಲೆ ಗುಡ್ಡೆ ಅರಣ್ಯ ಪರಿಶೀಲನೆ ಆರಂಭಿಸಿದ ಎಸ್.ಐ.ಟಿ

0

ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಮೃತದೇಹಗಳ ಅವಶಿಷ್ಟಗಳಿವೆ ಎಂಬ ಹೇಳಿಕೆಗಳ ಹಿನ್ನಲೆಯಲ್ಲಿ ಎಸ್.ಐ.ಟಿ ತಂಡ ಇಡೀ ಬಂಗ್ಲೆ ಗುಡ್ಡೆ ಅರಣ್ಯವನ್ನು ಹುಡುಕುವ ಕಾರ್ಯ ಆರಂಭಿಸಿದ್ದಾರೆ.

ಸಾಕ್ಷಿ ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆ ಇದೇ ಬಂಗ್ಲೆ ಗುಡ್ಡದಿಂದ ತಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ‌ ಇದೆ ಸ್ಥಳ ಮಹಜರು ನಡೆಸಲು ತೆರಳಿದ ವೇಳೆ ಹಲವಾರು ಮೃತದೇಹಗಳ ಅವಶೇಷಗಳು ಇಲ್ಲಿ ಕಂಡುಬಂದಿರುವುದಾಗಿ ವಿಠಲ ಗೌಡ ಹೇಳಿಕೆ ನೀಡಿದ್ದರು ಈ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಲ್ಲಿ ಸ್ಥಳಪರಿಶೀಲನೆ ನಡೆಸುವ ಬಗ್ಗೆ ಎಸ್.ಐ.ಟಿಯ ಅಧಿಕಾರಿಗಳು ಚಿಂತನೆ ನಡೆಸಿದ್ದರು ಇದೀಗ ಅರಣ್ಯ ಇಲಾಖೆಯ ಎಲ್ಲ ಅನುಮತಿಗಳನ್ನು ಪಡೆದುಕೊಂಡು ಎಸ್.ಐ.ಟಿ ತಂಡ ಬಂಗ್ಲೆ ಗುಡ್ಡದಲ್ಲಿ ಪರಿಶೀಲನೆಗೆ ತೆರಳಿದೆ. ಸುಮಾರು 12ಎಕ್ರೆಗೂ ಹೆಚ್ಚಿರುವ ಅರಣ್ಯವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದು ಇಡೀ ಪ್ರಕರಣದಲ್ಲಿ ಅತ್ಯಂತ ಮಹತ್ವದ ವಿಚಾರವಾಗಲಿದೆ. ಅರಣ್ಯದ ಆರಂಭದ ಭಾಗದಿಂದ ಪರಿಶೀಲನೆ ಆರಂಭಿಸಲಾಗಿದ್ದು ಅನುಮಾನವಿತುವ ಸ್ಥಳಗಳನ್ನು, ಹಾಗೂ ಅಸ್ತಿ ಪಂಜರಗಳಿರುವ ಸ್ಥಳಗಳನ್ನು ಗುರುತಿಸುವ ಕಾರ್ಯವನ್ನು ಇಂದು ಮಾಡಲಿರುವುದಾಗಿ ತಿಳಿದು ಬಂದಿದೆ
ಎಸ್.ಐ‌.ಟಿ ಅಧಿಕಾರಿಗಳಾದ ಜಿತೇಂದ್ರಕುಮಾರ್ ದಯಾಮ, ಸೈಮನ್ ಹಾಗೂ ಇತರ ಅಧಿಕಾರಿಗಳು ಆಗಮಿಸಿದ್ದಾರೆ.
ಅವರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಇದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version