


ಬೆಳ್ತಂಗಡಿ; ತಲೆಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದ್ದ ಯುಟ್ಯೂಬರ್ ಗಳಾದ ಅಭಿಷೇಕ್ ಹಾಗೂ ಮನಾಫ್ ಅವರ ವಿಚಾರಣೆಯನ್ನು ಹಾಗೂ ಹೇಳಿಕೆ ದಾಖಲಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಬುಧವಾರ ಪೂರ್ಣ ಗೊಳಿಸಿದ್ದು ವಿಚಾರಣೆ ಮುಗಿಸಿ ಇವರಿಬ್ಬರೂ ಹಿಂತಿರುಗಿದ್ದಾರೆ.
ಯುಟ್ಯೂಬರ್ ಅಭಿಷೇಕ್ ಅವರನ್ನು ಕಳೆದ ಒಂದು ವಾರದಿಂದ ಎಸ್.ಐ.ಟಿ ತಂಡ ವಿಚಾರಣೆ ನಡೆಸಿತ್ತು. ಇವರಿಂದ ಮೊಬೈಲ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಈತ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈತನ ವಿಚಾರಣೆ ಹೇಳಿಕೆ ಪಡೆಯುವ ಕಾರ್ಯ ಪೂರ್ಣಗೊಂಡಿದೆ.
ಕಳೆದ ಮೂರು ದಿನಗಳಿಂದ ಕೇರಳದ ಯುಟ್ಯೂಬರ್ ಮನಾಫ್ ಅವರ ವಿಚಾರಣೆ ನಡೆಯುತ್ತಿತ್ತು ಬುಧವಾರ ರಾತ್ರಿಯ ವೇಳೆಗೆ ಅವರ
ವಿಚಾರಣೆ ಹಾಗೂ ಹೇಳಿಕೆ ನೀಡುವ ಕಾರ್ಯ ಪೂರ್ಣಗೊಂಡಿದ್ದು ಅವರು ಹಿಂತಿರುಗಿದ್ದಾರೆ.
ವಜಚಾರಣೆ ಮುಗಿಸಿ ಹೊರಬಂದ ಮನಾಫ್ ಮಾತನಾಡಿ ಎಸ್.ಐ.ಟಿ ತನಿಖೆ ಅತ್ಯಂತ ಉತ್ತಮರೀತಿಯಲ್ಲಿ ನಡೆಯುತ್ತಿದೆ ನಮ್ಮಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದ್ದೇವೆ ವಿಚಾರಣೆ ಹಾಗೂ ಹೇಳಿಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು ಇನ್ನು ವಿಚಾರಣೆಗೆ ಬರಲು ಸೂಚಿಸಿಲ್ಲ ಎಂದು ತಿಳಿಸಿದರು.
