Home ಅಪರಾಧ ಲೋಕ ಬುರುಡೆ ಪ್ರಕರಣ ಚಿನ್ನಯ್ಯ ಇಂದು ನ್ಯಾಯಾಲಯಕ್ಕೆ ಹಾಜರು

ಬುರುಡೆ ಪ್ರಕರಣ ಚಿನ್ನಯ್ಯ ಇಂದು ನ್ಯಾಯಾಲಯಕ್ಕೆ ಹಾಜರು

0


ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿ ಬಂದಿದ್ದ ಸಾಕ್ಷಿ ದೂರುದಾರ‌ ಚಿನ್ನಯ್ಯ ನ ಎಸ್.ಐ‌.ಟಿ ಕಸ್ಟಡಿ ಅವಧಿ ಮುಗಿದಿದ್ದು ಶನಿವಾರ ಆತನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ
ಆ23 ರಂದು ಚಿನ್ನಯ್ಯ ನನ್ನು ಎಸ್.ಐ.ಟಿ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸೆ.3ರ ವರೆಗೆ ವಶಕ್ಕೆ ಪಡೆದಿದ್ದರು, ಸೆ.3ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸೆ‌6 ರ ವರೆಗೆ ಆತನನ್ನು ಎಸ್.ಐ‌.ಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿತ್ತು. ಶನಿವಾರ ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯಕ್ಕೆ‌ಹಾಜರು ಪಡಿಸಲಾಗುತ್ತಿದೆ. ಬುರುಡೆ ಪ್ರಕರರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ನ ವಿಚಾರಣೆ ಬಹುತೇಕ ಮುಗಿದಿರುವುದಾಗಿ ತಿಳಿದು ಬಂದಿದ್ದು ಎಸ್.ಐ.ಟಿ ತಂಡ‌ಈತನನ್ನು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಗಳು ಹೆಚ್ಚಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version