Home ಅಪರಾಧ ಲೋಕ ವಸಂತ್ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

ವಸಂತ್ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

0

ಬೆಳ್ತಂಗಡಿ; ಧರ್ಮ ಧರ್ಮಗಳ ನಡುವೆ ಜಾತಿಗಳ ಮಧ್ಯೆ ದ್ವೇಷ ಹುಟ್ಟುವಂತೆ ಪ್ರಚೋದನಕಾರಿಯಾಗಿ ಮಾತನಾಡಿ ಅದನ್ನು ಸಾಮಾಜಿಕ ಜಲತಾಣವಾದ ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದ ಬಗ್ಗೆ ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ನೀಡಿದ ದೂರಿನಂತೆ ಸೆಕ್ಷನ್ 196(1)(a), 353(2) ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಲಾಗಿದೆ.
ಈಬಗ್ಗೆ ಶೇಖರ ಲಾಯಿಲ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು
ಬೆಂಗಳೂರಿನಲ್ಲಿ ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ವಸಂತ ಗಿಳಿಯಾರ್ ಅವರು ಬೆಳ್ತಂಗಡಿ ಭಾಗದಲ್ಲಿ ಮಿಷನರಿಗಳ ಪ್ರಭಾವದಿಂದ ಹಿಂದುಗಳ ತುಳಸಿಕಟ್ಟೆಯನ್ನು ಒಡೆಸಿ ಅಲ್ಲಿ ಶಿಲುಬೆಯನ್ನು ಇಡಲಾಗಿತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂದ ಬಳಿಕ ಶಿಲುಬೆಗಳನ್ನು ತೆಗೆದು ಮತ್ತೆ ತುಳಸಿಕಟ್ಟೆಗಳನ್ನು ಮರು ಸ್ಥಾಪಿಸಿದ್ದರು ಎಂದು ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹೇಳಿಕೆಯಿಂದಾಗಿ ಧರ್ಮ ಧರ್ಮಗಳ ನಡುವೆ ಅಪನಂಬಿಕೆ ಸೃಷ್ಟಿಯಾಗಿ ಘರ್ಷಣೆಗೆ ಕಾರಣವಾಗಿದ್ದಾರೆ ಎಂದು ದೂರು ನೀಡಿದ್ದರು ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version