Home ಬ್ರೇಕಿಂಗ್‌ ನ್ಯೂಸ್ ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ; ಎಸ್.ಐ.ಟಿ ಯಿಂದ ದೂರುದಾರನನ್ನು ರಾತ್ರಿ ಪೂರ್ತಿ...

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ; ಎಸ್.ಐ.ಟಿ ಯಿಂದ ದೂರುದಾರನನ್ನು ರಾತ್ರಿ ಪೂರ್ತಿ ವಿಚಾರಣೆ

0

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ದೂರುದಾರನನ್ನು ಆ.22 ರಂದು ಬೆಳಗ್ಗೆ 10 ಗಂಟೆಯಿಂದ ಆ.23 ರ ಬೆಳಗ್ಗಿನ ಜಾವ 5 ಗಂಟೆಯವರೆಗೆ ತೀವ್ರ ವಿಚಾರಣೆಯನ್ನು ಖದ್ದು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರ ನೇತೃತ್ವದ ತಂಡ ನಡೆಸಿರುವುದಾಗಿ ಮಾಹಿತಿಗಳು ಲಭ್ಯವಾಗುತ್ತಿದೆ.

ಎಸ್.ಐ.ಟಿ ತಂಡ ಆರಂಭದಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಸಾಕ್ಷಿ ದೂರುದಾರ ತೋರಿಸಿದ ಸ್ಥಳಗಳಲ್ಲಿ ಅಗೆಯುವ ಕಾರ್ಯ ಮಾಡಿದ್ದರು. ಅಲ್ಲಿ ಸಿಕ್ಕಿರುವ ಮಾಹಿತಿಗಳ ಹಿನ್ನಲೆಯಲ್ಲಿ ತಂಡ ಇದೀಗ ತನಿಖೆ ನಡೆಯುತ್ತಿದೆ. ಆರಂಭದಲ್ಲಿ ದಾಖಲೆಗಳ ಸಂಗ್ರಹ ಹಾಗೂ ಪರಿಶೀಲನೆ ನಡೆಸುತ್ತಿದ್ದರು ಇದೀಗ ಸಾಕ್ಷಿ ದೂರುದಾರನಿಂದ ಮಾಹಿತಿಗಳನ್ನು ಕಲೆ ಹಾಕುವ ಕಾರ್ಯ ಮಾಡುತ್ತಿದೆ. ಈತನಿಂದ ಲಭಿಸುವ ಮಾಹಿತಿಗಳು ಅತ್ಯಂತ ಮಹತ್ವದ್ದಾಗಿದ್ದು ಅದರ ಆಧಾರದಮೇಲೆಯೇ ಇಡೀ ತನಿಖೆ ಮುಂದೆ ಹೋಗಲಿದೆ.
ವಿಧಿವಿಜ್ಞಾನ ಪ್ರಯೋಗಾ ಲಯಗಳಿಂದ ಮಾಹಿತಿಗಳು ಲಭ್ಯವಾದರೆ ತನಿಖೆಯಲ್ಲಿ ಅತ್ಯಂತ ಮಹತ್ವದ ವಿಚಾರವಾಗಲಿದೆ. ಈ ವರೆಗೆ ಎಸ್.ಐ.ಟಿ ಗೆ ಲಭಿಸಿರುವ ಮಾಹಿತಿಗಳ ಹಿನ್ನಲೆಯಲ್ಲಿ ಈತನ ಹೇಳಿಕೆಗಳು ಸರಿ ಹೊಂದುತ್ತಿದೆಯೇ ಎಂಬ ಪರಿಶೀಲನೆಯನ್ನು ಎಸ್.ಐ‌.ಟಿ ತಂಡ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಎಸ್.ಐ.ಟಿ ತಂಡ ಶನಿವಾರ ಯಾವರೀತಿಯ ಕಾರ್ಯಾಚರಣೆ ನಡೆಸಲಿದೆ ಎಂಬುದು ಕುತೂಹಲದ ವಿಚಾರವಾಗಿದೆ

NO COMMENTS

LEAVE A REPLY

Please enter your comment!
Please enter your name here

Exit mobile version