
ಬೆಳ್ತಂಗಡಿ: ಅನನ್ಯ ಭಟ್ ಎಂಬ ಮಗಳೇ ಇಲ್ಲ ನಾನು ಸುಳ್ಳು ಹೇಳಿದ್ದೇನೆ ಎಂದು ಸುಜಾತಾ ಭಟ್ ಯೂಟ್ಯೂಬ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದು ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಅವರು ಈ ರೀತಿ ಹೇಳಲು, ಹೇಳಿದ್ದರು. ಅನನ್ಯ ಭಟ್ ಎಂಬ ಮಗಳೇ ಇಲ್ಲ. ತಾತಾನ ಆಸ್ತಿ ವಿಷಯದಲ್ಲಿ ನಾನು ಈ ರೀತಿ ಮಾಡಿದ್ದೇನೆ ಎಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಪೋಟೋ ತೋರಿಸಿರುವುದು ದೂರು ನೀಡಿರುವುದು ಸುಳ್ಳು. ನನ್ನ ಆಸ್ತಿಯನ್ನು ನನಗೆ ಮಾಹಿತಿಯಿಲ್ಲದೆ ಮಾರಿದ್ದಾರೆ ಈ ಕಾರಣಕ್ಕೋಸ್ಕರ ನಾನು ಅನನ್ಯ ಭಟ್ ಕಥೆ ಕಟ್ಟಿದ್ದೇನೆ. ನಮ್ಮ ಆಸ್ತಿಯನ್ನು ಅವರಿಗೆ ಕೊಟ್ಟಿದ್ದನ್ನು ಪ್ರಶ್ನಿಸಿದ್ದೇನೆ. ನನಗೆ ಈ ಮಟ್ಟಕ್ಕೆ ಬರುತ್ತದೆ ಎಂದು ಗೊತ್ತಿಲ್ಲ.
ನನ್ನನು ಈ ಕೇಸ್ ನಿಂದ ಮುಕ್ತಿಗೊಳಿಸಿ, ಅದಕ್ಕಾಗಿ ನಾನು ದೇಶದ, ನಾಡಿನ ಜನರ ಕ್ಷಮೆ ಕೇಳುತ್ತೇನೆ. ಧರ್ಮಸ್ಥಳದವರಲ್ಲಿಯೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ತನ್ನ ಮಗಳು ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ಧರ್ಮಸ್ಥಳಕ್ಕೆ ಹೋಗಿದ್ದಾಗ ಅಲ್ಲಿ ನಾಪತ್ತೆಯಾಗಿದ್ದಳು ಎಂದು ಸುಜಾತಾ ಭಟ್ ಎಸ್ ಐಟಿಗೆ ದೂರು ನೀಡಿದ್ದರು.