Home ಅಪರಾಧ ಲೋಕ ಧರ್ಮಸ್ಥಳದಲ್ಲಿ  ಜಿ.ಪಿ.ಆರ್ ಕಾರ್ಯಾಚರಣೆಗೆ ಕ್ಷಣಗಣನೆ

ಧರ್ಮಸ್ಥಳದಲ್ಲಿ  ಜಿ.ಪಿ.ಆರ್ ಕಾರ್ಯಾಚರಣೆಗೆ ಕ್ಷಣಗಣನೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿರುವ 13ನೇ ಸ್ಥಳದಲ್ಲಿ ಸೋಮವಾರ ಜಿಪಿಆರ್ ಕಾರ್ಯಾಚರಣೆಗೆ ಎಲ್ಲ ಸಿದ್ದತೆಗಳು ನಡೆದಿದ್ದು ಇದೀಗ ಕೆಲವೇ ಹೊತ್ತಿನಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.
ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಮುಂದೂಡಲ್ಪಡುತ್ತಿದ್ದು ಇದೀಗ ಮಂಗಳವಾರ ಇಲ್ಲಿ ಅಧಿಕೃತವಾಗಿ ಪರಿಶಿಲನಾಕಾರ್ಯ ನಡೆಯಲಿದೆ.
ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪದ 13ನೇ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ 3 ರಿಂದ 3:30ರ ವರೆಗೆ ಪ್ರಾಯೋಗಿಕ ಕಾರ್ಯಾಚರಣೆ ನಡೆಯಿತು.ಬಳಿಕ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ, 30 ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ್ದರು.
ಇದೀಗ ಕಲೆವೇ ಕ್ಷಣಗಳಲ್ಲಿ ಸ್ಥಳದಲ್ಲಿ ಎಸ್.ಐ.ಟಿ ತಂಡದ ನೇತೃತ್ವದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ ನಡೆಯಲಿದೆ.

ಸ್ಥಳದಲ್ಲಿ ಬಿಗು ಬಂದೋಬಸ್ತ್

ಕಾರ್ಯಾಚರಣೆ ನಡೆಯಲಿರುವ ನೇತ್ರಾವತಿ ಅಜಿಕುರಿ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿಯೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version