Home ಅಪರಾಧ ಲೋಕ ನೇತ್ರಾವತಿ ಸ್ನಾನಘಟ್ಟದ 11ನೆಯ ಸ್ಥಳದಲ್ಲಿ ಹುಡುಕಾಟ ಆರಂಭಿಸಿದ ಎಸ್.ಐ.ಟಿ

ನೇತ್ರಾವತಿ ಸ್ನಾನಘಟ್ಟದ 11ನೆಯ ಸ್ಥಳದಲ್ಲಿ ಹುಡುಕಾಟ ಆರಂಭಿಸಿದ ಎಸ್.ಐ.ಟಿ

0

ಬೆಳ್ತಂಗಡಿ;ನೇತ್ರಾವತಿ ಸ್ನಾನಘಟ್ಟದ ಸಮೀಪ ಅನಾಮಿಕನ ಹೇಳಿಕೆಯ ಮೇರೆಗೆ  ಕಳೆಬರಕ್ಕಾಗಿನ ಹುಡುಕಾಟ ಕಾರ್ಯಾಚರಣೆ ಏಳನೆ ದಿನವಾದ ಮಂಗಳವಾರ ಆರಂಭವಾಗಿದೆ.
ಇಂದು ಸಾಕ್ಷಿ ದೂರು ದಾರ ಈ ಹಿಂದೆ ಗುರುತಿಸಿದ್ದ 11ನೆಯ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೋಮವಾರ ಈತ ತೋರಿಸಿದ ಪ್ರದೇಶದಲ್ಲಿ ಕಳೆಬರ ಲಭ್ಯವಾಗಿತ್ತು ಈ ಹಿನ್ನಲೆಯಲ್ಲಿ ಈತ ಈ ಹಿಂದೆ ಗುರುತಿಸಿದ 11ನೆಯ ಸ್ಥಳದಲ್ಲಿಯೇ ಇಂದು ಹುಡುಕಾಟ ಆರಂಭಿಸಿದ್ದಾರೆ. ಉಳಿದಂತೆ ಇನ್ನೂ ಹಲವಡೆ ಇರುವುದಾಗಿ ಆತ ಹೇಳಿದ್ದರೂ ಅದರ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಿರುವುದಾಗಿ ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ 11.30 ರ ಸುಮಾರಿಗೆ ಎಸ್.ಐ.ಟಿ ತಂಡ ಸಾಕ್ಷಿದೂರುದಾರನದಿಗೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರೆ.

NO COMMENTS

LEAVE A REPLY

Please enter your comment!
Please enter your name here

Exit mobile version