Home ಸ್ಥಳೀಯ ಸಮಾಚಾರ ಪದ್ಮಲತಾ ಮನೆಗೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ನೇತೃತ್ವದ ನಿಯೋಗ ಭೇಟಿ; ಮರು ತನಿಖೆಗೆ ಒತ್ತಾಯ

ಪದ್ಮಲತಾ ಮನೆಗೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ನೇತೃತ್ವದ ನಿಯೋಗ ಭೇಟಿ; ಮರು ತನಿಖೆಗೆ ಒತ್ತಾಯ

0

ಬೆಳ್ತಂಗಡಿ: ದಶಕಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸಿಪಿಐಎಂ ಮುಖಂಡ‌ ದೇವಾನಂದ ಅವರ ಮಗಳು ಪದ್ಮಲತಾಳ ಮನೆಗೆ ಸಿಪಿಐ ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಕಾಶ್ ನೇತೃತ್ವವ ತಂಡ ಭೇಟಿ ನೀಡಿ ಪದ್ಮಲತಾಳ ತಾಯಿ ಹಾಗೂ ಸಹೋದರಿ ಹಾಗೂ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಪ್ರಕರಣದ ಬಗ್ಗೆ ಮುಂದಿನ ತನಿಖೆಗಳಿಗೆ ಒತ್ತಾಯಿಸುವ ಕುರಿತು ಮನೆಯವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಬೆಳ್ತಂಗಡಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿಐ.ಎ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ ಇದೀಗ ಅನಾಮಿಕ ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ರಚನೆಯಾಗಿರುವ ಎಸ್.ಐ.ಟಿ ತಂಡದಿಂದಲೆ ಪದ್ಮಲತಾ ಪ್ರಕರಣ,‌ಆನೆ ಮಾವುತನ ಹಾಗು ಸಹೋದರಿಯ ಕೊಲೆ ಪ್ರಕರಣ, ಸೌಜನ್ಯ ಪ್ರಕರಣ, ವೇದವಲ್ಲಿ ಪ್ರಕರಣಗಳ ತನಿಖೆಯನ್ನು ನಡೆಸಬೇಕು ಅದು ಸಾಧ್ಯವಾಗದಿದ್ದಲ್ಲಿ ಈ ಎಲ್ಲ ಪ್ರಕರಣಗಳ ಬಗ್ಗೆ ಹಾಗೂ ಧರ್ಮಸ್ಥಳ ದಲ್ಲಿನ ಜಾಗದ ಹಗರಣಗಳ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಎಸ್.ಐ.ಟಿ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪದ್ಮಲತಾ ಪ್ರಕರಣ ನಡೆದಾಗಲೂ ಸಿಪಿಐಎಂ ಪಕ್ಷ ನ್ಯಾಯಕ್ಕಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮತ್ತೆ ಈ ಪ್ರಕರಣಗಳಲ್ಲಿ ನ್ಯಾಯ ಕೇಳುತ್ತಿದ್ದೇವೆ.
ಬಿಜೆಪಿ ನಾಯಕ ಆರ್ ಅಶೋಕ್ ಕಮ್ಯೂನಿಸ್ಟರ ವಿರುದ್ದ ಮಾತನಾಡುತ್ತಿರುವುದು ಮತ್ತು ಕೇರಳ ಸರಕಾರವನ್ನು ಎಳೆತರುತ್ತಿರುವುದು ಅವರ ಹತಾಶೆಯನ್ನು ತೋರಿಸಿದೆ ಜನರ ಪರವಾಗಿ ಧ್ವನಿಯೆತ್ತಬೇಕಾದ ವಿಪಕ್ಷ ನಾಯಕರು ಈ ರೀತಿ ಮಾತನಾಡುತ್ತಿರುವುದು ದುರಂತವಾಗಿದೆ ಎಂದರು.

ಪದ್ಮಲತಾ ಮನೆಗ ಭೇಟಿ ನೀಡಿದ ನಿಯೋಗದಲ್ಲಿ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಕಾಶ್.ಕೆ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ, ಕೆ.ಎಸ್‌ ವಿಮಲ, ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿಮೆಂ ಭಟ್, ಈಶ್ವರಿ ಪದ್ಮುಂಜ ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version